Select Your Language

Notifications

webdunia
webdunia
webdunia
webdunia

ಎಲ್ಲ ಸಮಸ್ಯೆಗೂ ಭಗವದ್ಗೀತೆಯಿಂದ ಮುಕ್ತಿ: ಸಿಎಂ ಬೊಮ್ಮಾಯಿ

ಎಲ್ಲ ಸಮಸ್ಯೆಗೂ ಭಗವದ್ಗೀತೆಯಿಂದ ಮುಕ್ತಿ: ಸಿಎಂ  ಬೊಮ್ಮಾಯಿ
ಹುಬ್ಬಳ್ಳಿ , ಸೋಮವಾರ, 16 ಮೇ 2022 (09:55 IST)
ಹುಬ್ಬಳ್ಳಿ: ಜೀವನದ ಸಾರವನ್ನು ತಿಳಿದುಕೊಳ್ಳಬೇಕೆಂದ್ರೆ ಭಗವದ್ಗೀತೆ ಓದಬೇಕು. ಜೀವನದಲ್ಲಿ ಸಮಸ್ಯೆ ಬಂದ್ರೆ ಭಗವದ್ಗೀತೆ ಒಂದು ಪುಟ ತೆಗೆದು ನೋಡಿ. ಎಲ್ಲ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತೆ, ನನಗೂ ಇದರ ಅನುಭವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
 
ಹುಬ್ಬಳ್ಳಿಯ ಭಗವದ್ಗೀತೆ ಜ್ಞಾನಲೋಕಾರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತೆ, ನನಗೂ ಇದರ ಅನುಭವಾಗಿದೆ. ಹೀಗಾಗಿ ಭಗವದ್ಗೀತೆ ಜಗತ್ತಿನ ಶ್ರೆಷ್ಠ ಧರ್ಮಗ್ರಂಥ. ಈಶ್ವರಿ ಪ್ರಜಾಪಿಥ ಬ್ರಹ್ಮಕುಮಾರಿ ವಿಶ್ವವಿಧ್ಯಾಲಯದ ಕಾರ್ಯ ಅದ್ಬುತ ಎಂದರು.
 
ಭಗವದ್ಗೀತೆ ಎಲ್ಲರಿಗೂ ಗೊತ್ತಗಾಲಿ ಎನ್ನುವುದಕ್ಕೆ, ಈ ಜ್ಞಾನಲೋಕ ಮ್ಯುಸಿಯಂ ನಿರ್ಮಿಸಿದ್ದಾರೆ. ಧರ್ಮ ಶ್ರೆಷ್ಠವಾದ ಭಾರತ ನಮ್ಮದಾಗಬೇಕು. ಅದುವೇ ನಮ್ಮ ಪ್ರದಾನ ಮಂತ್ರಿ ಮೋದಿಯವ ಕನಸು.‌ ಅಸತ್ಯ ಸತ್ಯದ ಮೇಲೆ ಆಡಳಿತ ಮಾಡ್ತಿದೆ. ಅನ್ಯಾಯ‌ ನ್ಯಾಯದ ಮೇಲೆ ಪರಾಕ್ರಮ ಮಾಡ್ತಿದೆ. ಮೌಲ್ಯಯುತ ಸಮಾಜ ನಿರ್ಮಾಣ ಮಾಡೋಕೆ ಸಂಕಲ್ಪ‌ ಮಾಡೋಣ ಎಂದು ಹುಬ್ಬಳ್ಳಿಯ ಭಗವದ್ಗೀತೆ ಜ್ಞಾನಲೋಕ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಹೇಳಿದರು.
 
ಇನ್ನು ಇದೇ ವೇಳೆ ಹುಬ್ಬಳ್ಳಿ ಭೈರಿದೇವರಕೊಪ್ಪದಲ್ಲಿ ನಿರ್ಮಾಣಗೊಂಡಿರುವ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನ ಲೋಕ ಮ್ಯೂಸಿಯಂ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೋಕಾರ್ಪಣೆಗೊಳಿಸಿದರು.
 
ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ನಿರ್ಮಾಣವಾಗಿರುವ ಭಗವದ್ಗೀತಾ ಜ್ಞಾನಲೋಕ ಲೋಕಾರ್ಪಣೆ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಉಷ್ಣಗಾಳಿ ಹೊಡೆತಕ್ಕೆ ತತ್ತರಿಸಿದ ಉತ್ತರ ಭಾರತ