Select Your Language

Notifications

webdunia
webdunia
webdunia
webdunia

ವಿಕಲಚೇತನ ಯುವಕನ ಬೇಡಿಕೆಗೆ ಸ್ಪಂದಿಸಿ ಮಾನವೀಯತೆ ಮೆರೆದ ಸಿಎಂ ಬೊಮ್ಮಾಯಿ

cm bommai koppal wheelchare ವ್ಹೀಲ್ ಚೇರ್ ಸಿಎಂ ಬೊಮ್ಮಾಯಿ ಕೊಪ್ಪಳ
bengaluru , ಶನಿವಾರ, 14 ಮೇ 2022 (21:35 IST)
ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ  ಅಡವಿಬಾವಿ ಗ್ರಾಮದ ಶಿವಪ್ಪ ಎಂಬ ವಿಕಲಚೇತನ ಯುವಕನ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ. 
ಇಂದು ಬೆಂಗಳೂರಿನ ಬಿಜೆಪಿ ಕೋರ್ ಕಮೀಟಿ ಸಭೆಯ ನಂತರ ಹೊರಗೆ ಬಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಿವಪ್ಪ ತನ್ನ ತ್ರಿಚಕ್ರ ವಾಹನ ಅಪಘಾತಕ್ಕೆ ಈಡಾಗಿದ್ದು, ಹೊಸ ತ್ರಿ ಚಕ್ರ ವಾಹನಕ್ಕೆ ಮನವಿ ಮಾಡಿದರು. 
ಶಿವಪ್ಪನ ಮನವಿಗೆ ತಕ್ಷಣವೇ  ಸ್ಪಂದಿಸಿದ ಸಿಎಂ ಬೊಮ್ಮಾಯಿ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾತಾಡಿದರು. ಶಿವಪ್ಪನಿಗೆ ತ್ರಿಚಕ್ರ ವಾಹನದ ವ್ಯವಸ್ಥೆ ಮಾಡುವಂತೆ  ಸೂಚನೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿಂದು 96 ಕೊರೊನಾ ಸೋಂಕು ದೃಢ