ಮಡಿಕೇರಿ: ನಿಶ್ಚಿತಾರ್ಥವಾಗಿದ್ದ ಬಾಲಕಿಯ ಕೊಂದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಮೊನ್ನಂಡ ಪ್ರಕಾಶ್ (33) ಇದೀಗ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ಇದುವರೆಗೂ ಬಾಲಕಿಯ ರುಂಡ ಪತ್ತೆಯಾಗಿಲ್ಲ.
ಆರೋಪಿಯು ಹಮ್ಮಿಯಾಳದ ತನ್ನ ಗ್ರಾಮದ ಮನೆಯ ಹಿಂಭಾಗದಲ್ಲಿ ನೇಣಿಗೆ ಶರಣಾಗಿರುವ ಮಾಹಿತಿ ಲಭಿಸಿ ಪೊಲೀಸರು ಸ್ಥಳಕ್ಕೆ ಹೊರಟಿದ್ದಾರೆ.
ಗುರುವಾರ ಮೃತ ಆರೋಪಿ ಪ್ರಕಾಶ್ ಹಾಗೂ ಕೊಲೆಯಾದ ಬಾಲಕಿಗೂ ನಿಶ್ಚಿತಾರ್ಥವಾಗಿತ್ತು. ಈ ವೇಳೆ ಮಕ್ಕಳ ರಕ್ಷಣಾ ಘಟಕಕ್ಕೆ ಸ್ಥಳೀಯರೊಬ್ಬರು ಮಾಹಿತಿ ನೀಡಿ, 16 ವರ್ಷದ ಬಾಲಕಿಗೆ ನಿಶ್ಚಿತಾರ್ಥ ನಡೆಯುತ್ತಿದೆ ಎಂದು ದೂರು ನೀಡಿದ್ದರು.
ಸ್ಥಳಕ್ಕೆ ಬಂದ ಅಧಿಕಾರಿಗಳು ಮದುವೆಯನ್ನು ಮಾಡದಂತೆ ಬಾಲಕಿಯ ಪೋಷಕರ ಮನವೊಲಿಸಿದ್ದರು. 18 ವರ್ಷ ತುಂಬಿದ ನಂತರವೇ ಮದುವೆ ಮಾಡುವುದಾಗಿ ಮುಚ್ಚಳಿಕೆಯನ್ನು ಬರೆಸಿಕೊಂಡ ಅಧಿಕಾರಿಗಳು ವಾಪಸ್ಸಾದರು. ನಂತರ ಮನೆಗೆ ಬಂದ ಆರೋಪಿಯು ಬಾಲಕಿಯನ್ನು ಕಾಡಿಗೆ ಎಳೆದೋಯ್ದು ರುಂಡ ಕತ್ತರಿಸಿ, ಪರಾರಿಯಾಗಿದ್ದ.
ಇದೀಗ ಆತನೂ ಆತ್ಮಹತ್ಯೆಗೂ ಶರಣಾಗಿದ್ದಾನೆ.