Select Your Language

Notifications

webdunia
webdunia
webdunia
webdunia

ನೇಹಾ ಆರೋ‍ಪಿಗೆ ಇನ್ನಾರು ತಪ್ಪು ಮಾಡದಂತಹ ಕಠಿಣ ಶಿಕ್ಷೆಯಾಗಲಿದೆ: ಸಿಎಂ ಸಿದ್ದರಾಮಯ್ಯ

Chief Minister Siddaramaiah

Sampriya

ಹುಬ್ಬಳ್ಳಿ , ಗುರುವಾರ, 25 ಏಪ್ರಿಲ್ 2024 (20:29 IST)
Photo Courtesy X
ಹುಬ್ಬಳ್ಳಿ: ಸ್ನೇಹಿತನಿಂದಲೇ ಹತ್ಯೆಗೀಡಾದ ನೇಹಾ ಹಿರೇಮಠ್ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ನೀಡಿದರು.

ಮಗಳು ನೇಹಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಫೋಷಕರಿಗೆ ಸಾಂತ್ವನ ಹೇಳಿ ಕುಟುಂಬದ ಸದಸ್ಯರು ಮತ್ತು ಬಂಧುಗಳೊಂದಿಗೆ ಚರ್ಚಿಸಿದರು.

ಆರೋಪಿಗೆ ಆತನ ಕೃತ್ಯಕ್ಕೆ ಸರಿಯಾದ ಕಾನೂನಿನ ಶಿಕ್ಷೆ ಕೊಡಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ. ಈಗಾಗಲೇ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ತನಿಖೆ ಅತ್ಯಂತ ತ್ವರಿತವಾಗಿ ನಡೆಯುತ್ತಿದೆ.

ಇಂಥಾ ದುಷ್ಕರ್ಮಿಗಳು ಯಾರೇ ಇದ್ದರೂ ಮತ್ತೆ ಇಂಥಾ ಹೀನ ಕೃತ್ಯಕ್ಕೆ ಕೈ ಹಾಕಬಾರದು ಎನ್ನುವ ಸ್ಪಷ್ಟ ಎಚ್ಚರಿಕೆ ನೀಡುವ ರೀತಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸುಳ್ಳು ಹೇಳಿರುವ ಮೋದಿಗೆ ಮತ ನೀಡಬೇಡಿ: ಜನರಿಗೆ ಸಿದ್ದರಾಮಯ್ಯ ಕರೆ