Select Your Language

Notifications

webdunia
webdunia
webdunia
webdunia

ಮನೆ ಸುತ್ತಾ ಅನುಮಾನಸ್ಪದ ವ್ಯಕ್ತಿಗಳ ಓಡಾಟ: ಭದ್ರತೆ ಬೇಕೆಂದ ನೇಹಾ ತಂದೆ ನಿರಂಜನಯ್ಯ

Niranjanaiah

Sampriya

ಹುಬ್ಬಳ್ಳಿ , ಗುರುವಾರ, 25 ಏಪ್ರಿಲ್ 2024 (14:17 IST)
Photo Courtesy X
ಹುಬ್ಬಳ್ಳಿ: ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ತನ್ನ ಸ್ನೇಹಿತನಿಂದಲೇ ಹತ್ಯೆಗೀಡಾದ ನೇಹಾ ಅವರ ತಂದೆ ನಿರಂಜನಯ್ಯ ಹಿರೇಮಠ ಅವರು  ತಮ್ಮ ಜೀವಕ್ಕೂ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇಂದು ತಮ್ಮ ಬಿಡನಾಳದಲ್ಲಿರುವ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾ ಹತ್ಯೆ ನಡೆದು ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗಿದೆ. ಈ ಹಿನ್ನೆಲೆ ನಮ್ಮ ಮನೆಗೆ ಅನೇಕ ಗಣ್ಯ ವ್ಯಕ್ತಿಗಳು ಭೇಟಿ ನೀಡಿ ಸಾಂತ್ವನ ನೀಡುತ್ತಿದ್ದಾರೆ. ಈ ವೇಳೆ ಸಂಶಯಾಸ್ಪದ ವ್ಯಕ್ತಿಗಳೂ ಕಂಡು ಬರುತ್ತಿದೆ. ಇದರಿಂದ ನನ್ನ ಜೀವಕ್ಕೂ ಅಪಾಯವಿರುವ ಮುನ್ಸೂಚನೆ ಸಿಗುತ್ತಿದ್ದು, ನನ್ನ ಕುಟುಂಬಕ್ಕೆ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು' ಎಂದು ನಿರಂಜನಯ್ಯ ಹಿರೇಮಠ ಹೇಳಿದರು.

ನಮಗೆ ಸಾಂತ್ವನ ಹೇಳುವ ನೆಪದಲ್ಲಿ ಮನೆಯ ಸುತ್ತಾ ಮುತ್ತಾ ಅನುಮನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆ ಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಸೂಕ್ತ ಭದ್ರತೆ ಒದಗಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು ಎಂದರು.

ನೇಹಾ ಹತ್ಯೆಗೂ ಮುನ್ನಾ ಫಯಾಜ್ ತನ್ನ ಸ್ನೇಹಿತರೊಂದಿಗೆ ನಮ್ಮ ಮನೆ ಸುತ್ತಾ ಸುತ್ತಾಡಿದ್ದ. ಅದಲ್ಲದೆ ಮಗಳಿಗೆ ಕರೆ ಮಾಡಿ ಜೀವ ಬೆದರಿಕೆಯನ್ನು ಹಾಕಿದ್ದ. ಅಪಹರಿಸಲು ಯತ್ನಿಸಿದ್ದು, ಇದೊಂದು ವ್ಯವಸ್ಥಿತ ಕೃತ್ಯವಾಗಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಟ್ಯಾಕ್ಸ್ಯೂ, ಡೆತ್ ಟ್ಯಾಕ್ಸ್ಯೂ ಇಲ್ಲ, ಪಿತ್ರೊಡಾ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್