Select Your Language

Notifications

webdunia
webdunia
webdunia
webdunia

ಬಿಡಿಎ ಕಮಿಷನರ್ ವಿರುದ್ಧ ಸೋಮಶೇಖರ್ ಕೆಂಡಾಮಂಡಲ

ಬಿಡಿಎ ಕಮಿಷನರ್ ವಿರುದ್ಧ ಸೋಮಶೇಖರ್ ಕೆಂಡಾಮಂಡಲ
ಬೆಂಗಳೂರು , ಬುಧವಾರ, 1 ಮೇ 2019 (19:21 IST)
ಬಿಡಿಎ ಕಮಿಷನರ್ ವಿರುದ್ಧ ಶಾಸಕ ಎಸ್.ಟಿ. ಸೋಮಶೇಖರ್ ಮತ್ತೆ ಕೆಂಡಾಮಂಡಲರಾಗಿದ್ದಾರೆ.

ಶಾಸಕ ಎಸ್.ಟಿ ಸೋಮಶೇಖರ್ ಹೇಳಿಕೆ ನೀಡಿದ್ದು, ಡಿಸಿಎಂ ಭೇಟಿ ಮಾಡಿ ಕಾರ್ಪೋರೇಷನ್  ಬಜೆಟ್ ಚರ್ಚೆ ಮಾಡಲು ಬಂದಿದ್ದೇವೆ. ಸಮಾನ ಮನಸ್ಕ ಸಭೆಯನ್ನು ಮತ್ತೆ  ಕರೆಯುತ್ತೇವೆ. ಚಿಂಚೋಳಿ ಹಾಗೂ ಕುಂದಗೋಳ   ಉಪಚುನಾವಣೆ ಪ್ರಮುಖವಾಗಿದೆ. ಎಲ್ಲಾ ಶಾಸಕರು ಚುನಾವಣಾ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಶಾಸಕರ ಜೊತೆ ಮಾತುಕತೆ ನಡೆಸಿ ಸಭೆ ದಿನಾಂಕ ನಿರ್ಧಾರ ಮಾಡುವುದಾಗಿ ಹೇಳಿದ್ರು.  

ಬಿಡಿಎ ಕಮಿಷನರ್ ವಿರುದ್ಧ ಸೋಮಶೇಖರ್ ಕೆಂಡಾಮಂಡಲರಾಗಿದ್ದು, ಬಿಡಿಎ ಕಮಿಷನರ್ ಗೆ ಸಾರ್ವಜನಿಕರ ಮಹತ್ವ ಗೊತ್ತಿಲ್ಲ. ನೂರಾರು ಜನ ಸಾಯುತ್ತಾರೆ ನರಳುತ್ತಾರೆ. ಅರ್ಕಾವತಿ, ಕೆಂಪೇಗೌಡ ಬಡಾವಣೆ ಫೈನಲ್ ಆಗಿಲ್ಲ. ಕೋಟ್ಯಾಂತರ ಹೂಡಿಕೆ ಮಾಡಿದ್ರೂ ಅಪಾರ್ಟ್ಮೆಂಟ್ ಫೈನಲ್ ಆಗಿಲ್ಲ. ಡೆಪ್ಯೂಟಿ ಸೆಕ್ರೆಟರಿ ಮುವತೈದು ಸೈಟುಗಳನ್ನು ಅಕ್ರಮವಾಗಿ ಕೊಟ್ಟಿದ್ದಾರೆ ಎಂದು ದೂರಿದ್ರು. ಅವರ ವಿರುದ್ಧ ಕ್ರಮ ಜರಗುತ್ತಿಲ್ಲ. ಇದಕ್ಕೆ ಕಮಿಷನರ್ ಸ್ಪಂದಿಸುತ್ತಿಲ್ಲ. ಹಾಗಾದರೆ ಕಮಿಷನರನ್ನ ಕಂಟ್ರೋಲ್ ಮಾಡುವವರು ಯಾರು? ಎಂದರು.  

ಜನರ ಸಮಸ್ಯೆಗಳನ್ನು ಬಗೆಹರಿಸುವವರು ಯಾರು? ಈ ಬಗ್ಗೆ ಡಿಸಿಎಂ ಗಮನಕ್ಕೆ ತರಲಾಗಿದೆ. ಅಧ್ಯಕ್ಷ ಸ್ಥಾನ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಅಂತಾಗಬಾರದು ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಎಂ.ಕೃಷ್ಣ ಬರ್ತಡೇ; ಬಿಜೆಪಿ, ಕೈ ಪಡೆಯಿಂದ ಶುಭಾಶಯ