Select Your Language

Notifications

webdunia
webdunia
webdunia
webdunia

ಸೋಮಣ್ಣ ಡಿಕೆಶಿ ಪೊಟೊ ವೈರಲ್

Somanna Dkeshi photo viral
bangalore , ಮಂಗಳವಾರ, 14 ಮಾರ್ಚ್ 2023 (20:07 IST)
ವಸತಿ ಸಚಿವ ವಿ ಸೋಮಣ್ಣ ಕಾಂಗ್ರೆಸ್ ಗೆ ಸೇರ್ಪಡೆ ಆಗ್ತಾರೆ ಅನ್ನುವು ಮಾತು ಇತ್ತಿಚೆಗೆ ಕೇಳಿಬರ್ತಾಯಿದೆ.ಇದಕ್ಕೆ ಪುಷ್ಠಿ ಎಂಬಂತೆ ಇಂದು ವಿ ಸೋಮಣ್ಣ ಮತ್ತು ಡಿಕೆಶಿವಕುಮಾರ್ ಅವರು ಒಟ್ಟಿಗೆ ಕೂತು ಪ್ರಯಾಣ ಮಾಡುತ್ತಿರುವ ಪೊಟೊ ವೈರಲ್ ಆಗುತ್ತಿದೆ.ಇದರಿಂದ ಸೋಮಣ್ಣ ಅವರು ಕಾಂಗ್ರೆಸ್‌ ಸೇರುತ್ತಾರೆ ಎಂದು ಮಾತು ಕೇಳಿಬರುತ್ತಿದೆ.ಈ ಬಗ್ಗೆ ಮಾತನಡಿದ ಡಿಕೆಶಿವಕುಮಾರ್  ನಾವು ಬೇಕಾದಷ್ಟು ಧರ್ಮದ ಹೆಸರಿನಲ್ಲಿ,ಮಠಗಳ ವಿಚಾರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೀವಿ. ಅವರು ನಮ್ಮ ತಾಲ್ಲೂಕಿನ ಅವ್ರು. ಬೇಕಾದಷ್ಟು ಸಲ ನಮ್ಮ ಊರಿಗೆ ಬರ್ತಾ ಇರ್ತಾರೆ. ನೀವು ಅವ್ರ ಊರು ನೋಡಿಲ್ಲ.ಅವ್ರ ಸ್ವಂತ ಮನೆ ನಮ್ಮ ಕ್ಷೇತ್ರದವರು ನಾವು ಗೌರವ ನೀಡ್ತೀವಿ ಆ ಬಾಂಧವ್ಯ ಇದೆ.ಅವ್ರು ಬರ್ತಾರೆ ಅಂತ ಅವ್ರು ಹೇಳಿಲ್ಲ.ನಾನು ಕರೆದಿಲ್ಲ, ಪಾಪ ಅವ್ರ ಕೆಲಸ ಅವ್ರು ಮಾಡಿಕೊಂಡು ಇದ್ದಾರೆ.ಅಧಿವೇಶನ ಮುಗಿಸಿಕೊಂಡು ಬೆಳಗಾವಿಯಿಂದ ಫ್ಲೈಟ್ ನಲ್ಲಿ ಬರ್ತಾ ಇದ್ವಿ.ಆ ಪೋಟೋ ಬಂದಿದೆ,ಪಕ್ಕದಲ್ಲಿ ಕುಳಿತುಕೊಂಡ್ರೆ ಏನಿದೆ ಎಂದು ಸೋಮಣ್ಣವರು ಕಾಂಗ್ರೆಸ್ ಸೇರ್ಪಡೆಯನ್ನ ತಳ್ಳಿ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುಗಾದಿಗೆ ಊರಿಗೆ ಹೋಗುವವರಿಗೆ ಬಿಗ್ ಶಾಕ್ !