Publish Date: Tue, 14 Mar 2023 (16:34 IST)
Updated Date: Tue, 14 Mar 2023 (17:07 IST)
ಪ್ರದಾನಿ ನರೇಂದ್ರ ಮೋದಿ ಬೆಂಗಳೂರು-ಮೈಸೂರು ಹೈವೇ ಉದ್ಘಾಟನೆಗೆ ಆಗಮಿಸಿ, ಭರ್ಜರಿ ಮತಭೇಟೆ ನಡೆಸಿದ್ರು. ದಳಪರಿಗಳ ಕೋಟೆಯಲ್ಲಿ BJP ಮಿಂಚಿನ ಸಂಚಾರ JDS ಕಾರ್ಯಕರ್ತರಲ್ಲಿ ನಡುಕ ಹುಟ್ಟಿಸಿದೆ.. ಈ ಹಿನ್ನೆಲೆಯಲ್ಲಿ JDS ವರಿಷ್ಠರು ಅಲರ್ಟ್ ಆಗಿದ್ದು, ಮಂಡ್ಯ ಜಿಲ್ಲೆ JDS ಜನಪ್ರತಿನಿಧಿಗಳ ಜೊತೆ ಮಾಜಿ ಪ್ರದಾನಿ H.D ದೇವೇಗೌಡರು ಸಭೆ ನಡೆಸಿದ್ದಾರೆ. ತಮ್ಮ ಭದ್ರಕೋಟೆಯನ್ನ ಉಳಿಸಿಕೊಳ್ಳಲು HDD ಪ್ಲ್ಯಾನ್ ಮಾಡಿದ್ದು, ಅನಾರೋಗ್ಯದ ಮಧ್ಯೆಯೂ ಮಂಡ್ಯ ಜನಪ್ರತಿನಿಧಿಗಳ ಜೊತೆ ಮೀಟಿಂಗ್ ಮಾಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಭೆ ನಡೆದಿದ್ದು, ಸಿ.ಎಸ್.ಪುಟ್ಟರಾಜು,D.C. ತಮ್ಮಣ್ಣ, ಶ್ರೀನಿವಾಸ್, ಸುರೇಶ್‌ಗೌಡ, ಶ್ರೀಕಂಠಯ್ಯ, ಅಪ್ಪಾಜಿ ಗೌಡ, ಅನ್ನದಾನಿ ಜೊತೆ HDD ಸಮಾಲೋಚನೆ ನಡೆಸಿದ್ದಾರೆ.. ಮಂಡ್ಯ ಜಿಲ್ಲೆಯಲ್ಲಿ ಪಕ್ಷವನ್ನ ಮತ್ತಷ್ಟು ಬಲಪಡಿಸಿ, 7 ಕ್ಷೇತ್ರಗಳನ್ನ ಗೆಲ್ಲಲು ಬೇಕಾದ ತಂತ್ರಗಳನ್ನು ಅನುಸರಿಸಿ ಎಂದು ದೇವೇಗೌಡರು ಕರೆ ನೀಡಿದ್ದಾರೆ ಎನ್ನಲಾಗಿದೆ.. ಪ್ರತೀ 10 ದಿನಕ್ಕೊಮ್ಮೆ ಮಂಡ್ಯದ ಸಂಪೂರ್ಣ ವರದಿ ನೀಡುವಂತೆ ಪ್ರತಿನಿಧಿಗಳಿಗೆ ತಿಳಿಸಿದ್ದು, ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುವಂತೆ HHD ಸಲಹೆ ನೀಡಿದ್ದಾರೆ ಎನ್ನಲಾಗಿದೆ.