ರಾಮನಗರ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ. ಇಲ್ಲಿ ಒಕ್ಕಲಿಗ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದರೆ ಗೆಲುವು ಸುಲಭ ಎಂಬ ಮಾತಿದೆ. ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಈ ಭಾರಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಈ ಕ್ಷೇತ್ರದ JDS ಅಭ್ಯರ್ಥಿಯಾಗಿ ನಿಲ್ಲಿಸಲು ತಯಾರಿ ನಡೆಸಿದ್ದಾರಂತೆ. ಈ ಹಿನ್ನೆಲೆಯಲ್ಲಿ JDSಗೆ ಠಕ್ಕರ್ ಕೊಡಲು ಕಾಂಗ್ರೆಸ್ ಸಜ್ಜಾಗಿದ್ದು, ಒಕ್ಕಲಿಗ JDS ನಾಯಕನ ಪ್ರತಿ ಸ್ಪರ್ಥಿಯಾಗಿ ಒಕ್ಕಲಿಗ ಕೈ ನಾಯಕ D.Kಸುರೇಶ್ಗೆ ಟಿಕೆಟ್ ನೀಡಲು ತಯಾರಿ ನಡೆಸಿದ್ದಾರೆ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿತ್ತು.. ಸಂಸದ D.K. ಸುರೇಶ್ ರಾಮನಗರದಿಂದ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆಗೆ ಸ್ವತಃ KPCC ಅಧ್ಯಕ್ಷ D.K. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ಈ ರೀತಿಯ ಪ್ರಪೋಸಲ್ ಇದೆ, ಇದನ್ನು ತಳ್ಳಿ ಹಾಕಲ್ಲ. ಕೂತು ಮಾತನಾಡಬೇಕು ಎಂಬ ಸಂದೇಶ ನನಗಿದೆ. ಹೈ ಕಮಾಂಡ್ನಿಂದ ಸಂದೇಶ ಬಂದಿದ್ದು ನಿಜ ಎಂದು ಡಿಕೆಶಿ ಹೇಳಿದ್ದಾರೆ. ಹಿಂದೆ ಈ ವಿಚಾರ ಚರ್ಚೆ ಆಗಿತ್ತು.. ಕಾರ್ಯಕರ್ತರು ರಾಮನಗರದಿಂದ D.K ಸುರೇಶ್ ಸ್ವರ್ಧೆಗೆ ಒತ್ತಾಯಿಸಿದ್ರು. ಆದರೆ ನಾವು ಅದರ ಬಗ್ಗೆ ತೀರ್ಮಾನ ಮಾಡಿರಲಿಲ್ಲ ಎಂದು ತಿಳಿಸಿದ್ರು.