Publish Date: Tue, 14 Mar 2023 (16:29 IST)
Updated Date: Tue, 14 Mar 2023 (16:44 IST)
ಚುನಾವಣೆ ಸಮೀಪಿಸುತ್ತಿದ್ದಂತೆ ತಮ್ಮನ್ನು ಸಮರ್ಥಿಸಿ, ಬೇರೆ ಪಕ್ಷದವರನ್ನು ಹಳಿದು ಮತ ಕೇಳುವ ಚಾಳಿ ಮುಂದುವರೆದಿದೆ. ಇದೀಗ JDS ವಿರುದ್ಧ ರಾಜ್ಯ BJP ಕಿಡಿಕಾರಿದೆ.. ಟ್ವೀಟ್ ಮೂಲಕ ಮಾಜಿ ಸಚಿವ H.D. ರೇವಣ್ಣ ವಿರುದ್ಧ BJP ಹರಿಹಾಯ್ದಿದೆ.. ಹೊಳೆನರಸೀಪುರ ಶಾಸಕರಾದ ರೇವಣ್ಣರಿಗೆ ಸೋಲುವ ಭಯ ಶುರುವಾಗಿದೆ. ಮಾಜಿ ಸಿಎಂ H.D. ಕುಮಾರಸ್ವಾಮಿ ಹಾಸನಕ್ಕೆ ಕಾಲಿಟ್ಟರೇ ಪ್ರತಿಭಟಿಸುತ್ತೇವೆ ಎನ್ನುವುದರಲ್ಲಿ ಅರ್ಥವಿದೆ. ಆದರೆ ಹಾಸನಕ್ಕೆ ಬಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಂಕುಸ್ಥಾಪನೆ ಮಾಡುವುದರಿಂದ ನಿಮಗೇಕೆ ಸಂಕಟ? ಎಂದು ಆಕ್ರೋಶದ ಜೊತೆಗೆ ವ್ಯಂಗ್ಯವಾಗಿದೆ. ಹಾಸನ ಏರ್‌ಪೋರ್ಟ್ ಬಿಜೆಪಿ ಸರ್ಕಾರದ ಕೊಡುಗೆ ಎಂದು ಹೇಳಲು JDSಗೆ ಅಂಜಿಕೆಯೇ ಎಂದು BJP ಪ್ರಶ್ನಿಸಿದೆ.