Select Your Language

Notifications

webdunia
webdunia
webdunia
webdunia

ತುಮಕೂರಿನಲ್ಲಿ ತಮ್ಮ ಸಂಚಾರ ಮುಂದುವರೆಸಿದ ಸೋಮಣ್ಣ

ಸೋಮಣ್ಣ
ತುಮಕೂರು :ಶನಿವಾರ ಕುಂಚಿಟಿಗ ಸಮುದಾಯ ಭವನದಲ್ಲಿ ನಡೆದ ಸಮಾಜದ ಮುಖಂಡರ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿ. ಸೋಮಣ್ಣ ಬಳಿಕ ವಿದ್ಯಾವಾಹಿನಿ ಕಾಲೇಜು ಸಂಸ್ಥಾಪಕ ಜಯಣ್ಣ ಅವರ ಮನೆಗೂ ಭೇಟಿ ನೀಡಿದ್ದಾರೆ. ವಿ. ಸೋಮಣ್ಣ ಅವರೊಂದಿಗೆ ಶಾಸಕ ಜ್ಯೋತಿ ಗಣೇಶ್‌, ಸುರೇಶ್‌ ಗೌಡ ಅವರೂ ಸಹ ಪಾಲ್ಗೊಂಡಿದ್ದರು. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆಯೇ ಮಾಜಿ ಸಚಿವ ವಿ. ಸೋಮಣ್ಣ ತುಮಕೂರಿನಲ್ಲಿ ತಮ್ಮ ಸಂಚಾರವನ್ನು ಮುಂದುವರೆಸಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು , ರಾಜಕೀಯ ಮುಖಂಡರನ್ನು ಭೇಟಿಯಾಗುತ್ತಿರುವ ವಿ. ಸೋಮಣ್ಣ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಸತತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಗುರುಭವನ ಸ್ಥಾಪಿಸಿದ ಸೋಮಣ್ಣ ಎಲ್ಲ ಪಕ್ಷದ ರಾಜಕೀಯ ಮುಖಂಡರನ್ನೂ ಕರೆದು ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿದ್ದರು. ಲೋಕಸಭಾ ಚುನಾವಣೆಯಲ್ಲಿ ತುಮಕೂರಿ ಕ್ಷೇತ್ರದಿಂದ ವಿ.ಸೋಮಣ್ಣ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆನ್ನಲಾಗಿದ್ದು, ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಕೆಂಪು ಗುಲಾಬಿಗೆ ಡಿಮ್ಯಾಂಡ್