Select Your Language

Notifications

webdunia
webdunia
webdunia
webdunia

ಚಾಮುಂಡಿ ತಾಯಿಗೆ ಹರಕೆ ರೂಪದಲ್ಲಿ ಬರುವ ಸೀರೆಯನ್ನೂ ಬಿಡದ ಖದೀಮರು, ಕಾಳಸಂತೆಯಲ್ಲಿ ಮಾರಾಟ

Chamundi Godess

Krishnaveni K

ಮೈಸೂರು , ಶುಕ್ರವಾರ, 13 ಡಿಸೆಂಬರ್ 2024 (10:34 IST)
Photo Credit: Instagram
ಮೈಸೂರು: ನಾಡದೇವತೆ ಚಾಮುಂಡಿ ತಾಯಿಗೆ ಹರಕೆ ರೂಪದಲ್ಲಿ ಬರುವ ಸೀರೆಯನ್ನೂ ಖದೀಮರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ಯ ಸ್ನೇಹಮಯಿ ಕೃಷ್ಣ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪ ಮಾಡಿ ಸುದ್ದಿಯಾಗಿದ್ದ ಸ್ನೇಹಮಯಿ ಕೃಷ್ಣ ಈಗ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ನಾಡದೇವತೆಗೆ ಭಕ್ತರು ಹರಕೆ ರೂಪದಲ್ಲಿ ನೀಡುವ ಸೀರೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಮಾಡಿದ್ದಾರೆ.

ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಮೂಟೆ ಕಟ್ಟಿ ದೇವಸ್ಥಾನದ ಕಾರ್ಯದರ್ಶಿ ರೂಪ ಕಾರಿನಲ್ಲಿ ಇಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರೂಪ ಮೇಲೆ ಮೈಸೂರಿನ ಕೆಆರ್ ಪೊಲೀಸ್ ಠಾಣೆಗೆ ದೂರು ಕೂಡಾ ನೀಡಿದ್ದಾರೆ. ಇದು ನಿಜವಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾಗಿದೆ.

ದೇವಸ್ಥಾನಕ್ಕೆ ದೇವಿಗೆಂದು ನಾನಾ ಹರಕೆ ಹೊತ್ತು ಭಕ್ತರು ಭಕ್ತಿ ಭಾವದಿಂದ ಸೀರೆ ಕೊಟ್ಟರೆ ಅದನ್ನು ತಮ್ಮ ಸ್ವಂತ ಲಾಭಕ್ಕೆ ಈ ರೀತಿ ಬೆಲೆಗೆ ಮಾರಾಟ ಮಾಡುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ. ಭಕ್ತರು ಕೊಡುವ ಸೀರೆಯಲ್ಲಿ ಅದರ ಬೆಲೆ, ಸ್ಟಿಕ್ಕರ್ ಎಲ್ಲವೂ ಇರುತ್ತದೆ. ಅದನ್ನೇ ಲಾಭ ಮಾಡಿಕೊಂಡು ಅದೇ ಬೆಲೆಗೆ ಸೀರೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತುಲ್ ಸುಭಾಷ್ ಪ್ರಕರಣದ ಇಫೆಕ್ಟ್: ಇನ್ನು ಮುಂದೆ ವಿಚ್ಛೇದನ ನೀಡಲು ಈ 8 ಸೂತ್ರಗಳು ಅನ್ವಯ