ಒಂದೇ ವಾರದಲ್ಲಿ 5 ಭಾರಿ ಹುಡುಕಿ ಕಚ್ಚಿದ ಅದೇ ಹಾವು ; ಹಾವಿನ ದ್ವೇಷ

Webdunia
ಶುಕ್ರವಾರ, 16 ಸೆಪ್ಟಂಬರ್ 2022 (16:28 IST)

ಯಾವ ಕಾರಣಕ್ಕಾಗಿ ದ್ವೇಷ ಸಾಧಿಸುತ್ತಿದೆ ಎಂಬುದು ಮಾತ್ರ ಇಲ್ಲಿಯವರೆಗೆ ತಿಳಿದು ಬಂದಿಲ್ಲ. ‌ಆಗ್ರಾ ಜಿಲ್ಲೆಯಲ್ಲಿರುವ 20 ವರ್ಷದ ಯುವಕ ರಜತ್​​ ಚಹರ್​ಗೆ ಕಳೆದ 10 ದಿನಗಳ ಅಂತರದಲ್ಲಿ ಐದಕ್ಕೂ ಹೆಚ್ಚು ಸಲ ಕಚ್ಚಿ ಗಾಯಗೊಳಿಸಿದೆ. ಅದೃಷ್ಟವಶಾತ್​​​ ಸಕಾಲದಲ್ಲಿ ಚಿಕಿತ್ಸೆ ಪಡೆದು ಆತ ಬದುಕುಳಿದಿದ್ದಾನೆ.

ರಜತ್​​ ಉತ್ತರ ಪ್ರದೇಶದ ಮಾಲ್ಪುರದ ಮಂಕೆಡಾ ಎಂಬಲ್ಲಿ ವಾಸವಾಗಿದ್ದಾನೆ. ಪದವಿ ವ್ಯಾಸಂಗ ಮಾಡುತ್ತಿದ್ದು ಮೊದಲ ಬಾರಿಗೆ ಸೆಪ್ಟೆಂಬರ್​​ 6 ರಂದು ರಾತ್ರಿ 10 ಗಂಟೆಗೆ ಮನೆಯ ಹೊರಗಡೆ ಹಾವು ಕಚ್ಚಿದೆ. ತಕ್ಷಣವೇ ವೈದ್ಯಕೀಯ ಕಾಲೇಜ್​​​ಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಸೆಪ್ಟೆಂಬರ್​ 8ರಂದು ಸಂಜೆಯ ವೇಳೆ ಮನೆ ಹೊರಗಡೆಯ ಶೌಚಾಲಯಕ್ಕೆ ಬಂದಾಗ ಮತ್ತೊಮ್ಮೆ ಹಾವು ಕಚ್ಚಿದೆ. ಈ ಸಂದರ್ಭಲ್ಲೂ ತಕ್ಷಣ ಚಿಕಿತ್ಸೆ ಕೊಡಿಸಲಾಗಿದೆ. ಇದಾದ ಬಳಿಕ ಸೆಪ್ಟೆಂಬರ್​ 11,13 ಹಾಗೂ 14ರಂದು ಕ್ರಮವಾಗಿ ಹಾವು ಕಚ್ಚಿದೆ. ಯುವಕನಿಗೆ ಪದೇ ಪದೇ ಹಾವು ಕಚ್ಚುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಸುದ್ದಿ ಎಲ್ಲೆಡೆ ಹರಡಿ ಆತನನ್ನು ನೋಡಲು ಜನ ಬರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾಲಿ ನ್ಯಾಯಾಧೀಶರು ಅಥವಾ ಸಿಬಿಐನಿಂದ ಅಬಕಾರಿ ಹಗರಣದ ತನಿಖೆಗೆ ವಿಜಯೇಂದ್ರ ಆಗ್ರಹ

6 ಸಾವಿರ ಕೋಟಿಯಲ್ಲಿ ಸಿದ್ದರಾಮಯ್ಯ, ಡಿಕೆಶಿ, ಸೋನಿಯಾ, ರಾಹುಲ್, ಖರ್ಗೆ ಪಾಲೆಷ್ಟು: ಛಲವಾದಿ ನಾರಾಯಣಸ್ವಾಮಿ

ಡಿಕೆ ಶಿವಕುಮಾರ್ ಗೆ ತಲೆಗೆ ಪೇಟ ಕಟ್ಟಿದ ಸಿದ್ದರಾಮಯ್ಯ Video

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ದಾಖಲೆ ಬರೆದ ಬೆಳ್ಳಿ ಬೆಲೆ, ಚಿನ್ನದ ಬೆಲೆ ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments