Select Your Language

Notifications

webdunia
webdunia
webdunia
webdunia

ಸಿದ್ದರಾಮೋತ್ಸವದ ವೇಳೆಯಲ್ಲಿ ನಾಪತ್ತೆಯಾದ ವ್ಯಕ್ತಿ ಪತ್ತೆ

webdunia
ಬೆಂಗಳೂರು , ಶುಕ್ರವಾರ, 16 ಸೆಪ್ಟಂಬರ್ 2022 (15:23 IST)
ಸಿದ್ದರಾಮೋತ್ಸವಕ್ಕೆ ತೆರಳಿ ನಾಪತ್ತೆಯಾಗಿದ್ದ ಬಾಗಲಕೋಟೆಯ ಗಿರಿಮಲ್ಲ ಖಂಡೇಕರ್ ಎಂಬುವವರು ಕೊನೆಗೂ ಒಂದೂವರೆ ತಿಂಗಳ ಬಳಿಕ ಕೊನೆಗೂ ಪತ್ತೆಯಾಗಿದ್ದಾರೆ.
 
ಜಮಖಂಡಿ ತಾಲೂಕಿನ ಅಡಿಹುಡಿ ಗ್ರಾಮದ ನಿವಾಸಿ ಗಿರಿಮಲ್ಲ ಖಂಡೇಕರ್ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ.
ಅಗಸ್ಟ್​ 2 ರಂದು ಗ್ರಾಮಸ್ಥರ ಜತೆಗೆ ಇವರು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಆದರೆ ಮನೆಗೆ ವಾಪಸಾಗಿರಲಿಲ್ಲ. ಅಡಿಹುಡಿ ಗ್ರಾಮದಿಂದ ಬಸ್ ಮೂಲಕ 50 ಜನ ತೆರಳಿದ್ದ ಇವರು ವಾಪಸಾಗದೇ ಮನೆಯವರೆಲ್ಲರೂ ಚಿಂತೆಗೀಡಾಗಿದ್ದರು.
 
'ದುಡ್ಡಿನ ಆಮಿಷ ಒಡ್ಡಿ ಮಗನನ್ನು ಕರೆದುಕೊಂಡು ಹೋಗಲಾಗಿತ್ತು. ಈಗ ಆತ ಪತ್ತೆಯಿಲ್ಲ' ಎಂದು ಗಿರಿಮಲ್ಲ ತಾಯಿ ಕಣ್ಣೀರು ಹಾಕಿದ್ದರು. ಇದು ಭಾರಿ ಸುದ್ದಿಯಾಗುತ್ತಲೇ ಖುದ್ದಿ ಸಿದ್ದರಾಮಯ್ಯ ಗಿರಿಮಲ್ಲ ಅವರ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದ್ದರು. 'ನಿಮ್ಮ ಮಗ ವಾಪಸ್​ ಬಂದೇ ಬರುತ್ತಾನೆ' ಎಂದಿದ್ದರು. 'ಗಿರಿಮಲ್ಲ ಜೀವಂತ ಇದ್ದಾನೆ, ಅವನಿಗೆ ಏನೂ ಆಗಿಲ್ಲ, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದಷ್ಟು ಬೇಗ ನಿಮ್ಮ ಮಗ ಮನೆಗೆ ಬರ್ತಾನೆ' ಎಂದಿದ್ದ ಸಿದ್ದರಾಮಯ್ಯ, 'ಸೆ. 27ಕ್ಕೆ ಮತ್ತೆ ಬಂದು ಆರ್ಥಿಕ ಸಹಾಯ ಮಾಡುವೆ' ಎಂದಿದ್ದರು.
 
ಮಗ ಬರುತ್ತಾನೆ ಎನ್ನುವ ಸಿದ್ದರಾಮಯ್ಯ ಅವರ ಭವಿಷ್ಯ ನಿಜವಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸಚಿವ ಶ್ರೀ ರಾಮುಲು ಅಸ್ತು