Select Your Language

Notifications

webdunia
webdunia
webdunia
webdunia

ಚೋರು ಸಹೋದರಿಯರು ಅಂದರ್

ಚೋರು ಸಹೋದರಿಯರು ಅಂದರ್
ಬೆಂಗಳೂರು , ಭಾನುವಾರ, 6 ಮಾರ್ಚ್ 2022 (15:39 IST)
ನಮ್ಮ ಮನೆಯಲ್ಲಿ ನಮ್ಮ ಅಪ್ಪ ದುಡ್ಡು ಇಟ್ಟಿದ್ದಾರೆ ಎಂದು ಹದಿಮೂರು ವರ್ಷದ ಬಾಲಕ ಹೇಳಿದ ಮಾತನ್ನು ಕೇಳಿಸಿಕೊಂಡು ಚೋರ ಸಹೋದರಿಯರು ಮನೆ ಬಾಡಿಗೆಗೆ ನೀಡಿದ್ದ ಮಾಲೀಕರ ಮನೆಗೆ ಕನ್ನ ಹಾಕಿ ಜೈಲು ಅತಿಥಿಗಳಾಗಿದ್ದಾರೆ.
ಸಿನಿಮಾ ಶೈಲಿಯಲ್ಲಿ ಮನೆ ಕಳ್ಳತನ ಮಾಡಿ ವಿಲಾಸಿ ಜೀವನ ಮಾಡುತ್ತಿದ್ದ ಚೋರ ಸಹೋದರಿಯರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
 
ತುಮಕೂರು ಮೂಲದ ಸಮಯ್ಯ ತಾಜ್ (23) ನಾಜೀಮಾ ತಾಜ್, ನಾಜೀಮಾ ಗಂಡ ಅಕ್ಬರ್ ಬಂಧನಕ್ಕೆ ಒಳಗಾದವರು. ಜಯನಗರದ ಒಂದನೇ ಬ್ಲಾಕ್‌ನ ದಯಾನಂದ ನಗರ ನಿವಾಸಿ ಜಬಿ ಮತ್ತ ಹಾಜೀರಾ ದಂಪತಿ ನಡೆಯಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಜಬಿ ಅವರ ಮನೆ ಬಾಡಿಗೆಗೆ ಬಂದಿದ್ದ ಕಳ್ಳ ಸಹೋದರಿಯರು ತಮ್ಮ ಕೈಚಳಕ ತೋರಿ ಕೈಗೆ ಕೋಳ ತೊಡಿಸಿಕೊಂಡಿದ್ದಾರೆ.
 
ಜಬಿ ಮತ್ತು ಹಾಜಿರಾ ದಂಪತಿ ಮನೆಗೆ ಬಾಡಿಗೆ ಬಂದಿದ್ದ ಸಮಯ್ಯ ತಾಜ್ ಮತ್ತು ನಾಜೀಮಾ ತಾಜ್ ತನ್ನ ಗಂಡ ಸೇರಿ ಕುಟುಂಬವೇ ಮನೆಯಲ್ಲಿತ್ತು. ಹಾಜೀರಾ ಮತ್ತು ಜಬಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಹದಿಮೂರು ವರ್ಷದ ಮಗ ಹಾಗೂ ಮಗಳಿದ್ದಳು. ಮನೆಯ ಮೊದಲನೇ ಮಹಡಿಯಲ್ಲಿ ಜಬೀ ವಾಸವಾಗಿದ್ದರು. ಎರಡನೇ ಮಹಡಿಯಲ್ಲಿ ನಾಜೀಮಾ ತಾಜ್ ಕುಟುಂಬ ನೆಲೆಸಿತ್ತು. ಎದುರು ಮನೆಯಲ್ಲಿ ಸುಮಯ್ಯ ತಾಜ್ ಬಾಡಿಗೆಗೆ ವಾಸವಾಗಿದ್ದಳು.
 
ಜಬಿ ಮನೆಯ ಟೆರೇಸ್ ಮೇಲೆ ಹೋಗಿ ಆಟ ಆಡುವ ಸಮಯದಲ್ಲಿ ನಮ್ಮ ಮನೆಯಲ್ಲಿ ಹಣವಿದೆ ಎಂದು ಹೇಳಿಕೊಂಡಿದ್ದ. ಇದನ್ನು ಕೇಳಿಸಿಕೊಂಡ ನಾಜಿಮಾ ತಾಜ್ ಹಣ ಎಗರಿಸಲು ಬಲೆ ಎಣೆದಿದ್ದಳು. ಜಬಿ ಲಾರಿ ಮಾರಿ ಮಗಳ ಮದುವೆ ಮಾಡಲು ನಾಲ್ಕು ಲಕ್ಷ ನಗದು ಹಣ ಮತ್ತು ಚಿನ್ನಾಭರಣ ಮಾಡಿಸಿಟ್ಟಿದ್ದ. ಇದನ್ನು ತಿಳಿದುಕೊಂಡ ನಾಜೀಮಾ ತಾಜ್ ಮನೆಗೆ ಕನ್ನ ಹಾಕಲು ಪ್ಲಾನ್ ರೂಪಿಸಿ ಪಕ್ಕದ ಮನೆಯಲ್ಲಿದ್ದ ಸಹೋದರಿ ಸುಮಯ್ಯ ತಾಜ್‌ಗೆ ವಿಚಾರ ತಿಳಿಸಿ ಎಲ್ಲರ ಸೇರಿ ಮನೆಗೆ ಸ್ಕೆಚ್ ಹಾಕಿದ್ದಾರೆ.
 
ನಾಜಿಮಾ ತಾಜ್ ಮನೆಗೆ ಅಡ್ಡ ಕೂತು ಯಾರು ಮನೆಯ ಮೇಲಕ್ಕೆ ಹೋಗದಂತೆ ಅಡ್ಡ ಕೂತಿದ್ದರು. ಈ ವೇಳೆ ಸಮಯ್ಯ ತಾಜ್ ಮತ್ತು ಅಕ್ಬರ್ ಮನೆಯ ಬೀರು ಬೀಗ ಒಡೆದು 2.34 ಲಕ್ಷ ರೂ. ಮೌಲ್ಯದ 58 ಗ್ರಾಂ ಚಿನ್ನಾಭರಣ, ಹತ್ತು ಲಕ್ಷ ರೂ. ನಗದು ಕದ್ದು ಫೆ. 19 ರಂದು ಎಸ್ಕೇಪ್ ಆಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಮೆರಾ ಕಳ್ಳಾರಿದಾರೆ ಎಚ್ಚರಿಕೆ