Publish Date: Mon, 08 Jan 2024 (14:22 IST)
Updated Date: Mon, 08 Jan 2024 (14:26 IST)
BBMP ಶಾಲೆಗಳು ಶಿಕ್ಷಣ ಇಲಾಖೆಯ ಸುಪರ್ದಿಗೆ ಹಿನ್ನೆಲೆ ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರಿಂದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೌನ ಪ್ರತಿಭಟನೆ ನಡೆಸಲಾಗ್ತಿದೆ.ಶಿಕ್ಷಣ ಇಲಾಖೆ ಬಿಬಿಎಂಪಿ ಶಾಲೆಗಳಿಗೆ ಹೊಸ ಶಿಕ್ಷಕರನ್ನ ನೇಮಕ ಮಾಡಿಕೊಳ್ಳಲು ಮುಂದಾಗಿದೆ.ಹೀಗಾಗಿ 772 ಶಿಕ್ಷಕರಿಗೆ ಇದೀಗ ಅಭದ್ರತೆ ಕಾಡುತ್ತಿದೆ.ನಮ್ಮನ್ನು ಖಾಯಂ ಮಾಡಿ ಸೇವೆ ಭದ್ರತೆ ಕೊಡ್ಬೇಕು.ಕಳೆದ 16 ವರ್ಷಗಳಿಂದ BBMP ಶಾಲೆಯಲ್ಲಿ ಕೆಲಸ ಮಾಡ್ತಿದ್ದೇವೆ.
ಬಿಬಿಎಂಪಿ ಶಾಲೆಯಿಂದ ನಮ್ಮ ಜೀವನ್ನ ನಡೆಸ್ತಿದ್ದೇವೆ.ಕೊರೊನಾ ಟೈಮ್ ನಲ್ಲಿ ನಾವು ಕೆಲಸ ಮಾಡಿದ್ದೇವೆ.ಇದೀಗ ಹೊಸ ಶಿಕ್ಷಕರನ್ನ ನೇಮಕ ಮಾಡಿದ್ರೆ ನಮ್ಮ ಜೀವನಕ್ಕೆ ತೊಂದರೆ ಆಗುತ್ತೆ.ನಮ್ಮ ಭವಿಷ್ಯ ಬಿಬಿಎಂಪಿ ಶಾಲೆಯಲ್ಲಿ ಇದೆ.ಹೀಗಾಗಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸ್ಬೇಕೆಂದು ಶಿಕ್ಷಕರು ಪಟ್ಟುಹಿಡಿದಿದ್ದಾರೆ.