ಬೆಂಗಳೂರು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ಇನ್ನೆಷ್ಟು ಮಂದಿ ಬಲಿಯಾಗಬೇಕು..?ಬೆಂಗಳೂರು ಜನರ ಜೊತೆ ಬೆಸ್ಕಾಂ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರಾ..?ಎಂಬ ಪ್ರಶ್ನೆ ಶುರುವಾಗಿದೆ.ಕಾಡುಗೋಡಿ ವಿದ್ಯುತ್ ದುರಂತ ಬಳಿಕವೂ ಅಧಿಕಾರಿಗಳು ಎಚ್ಚೇತ್ತುಕೊಂಡಿಲ್ಲ.ಬೆಂಗಳೂರು ಜನರೇ ರಸ್ತೆಯಲ್ಲಿ ಓಡಾಟ ನಡೆಸೋ ಮುನ್ನ ಎಚ್ಚರ ಇರಲಿ.ಅಪಾಯಕ್ಕೆ ಡೇಂಜರ್ ವಿದ್ಯುತ್ ಕಂಬಗಳು ಕಾಯುತ್ತಿವೆ.
ಬೆಂಗಳೂರು ನಗರದ ನಾಗರ ಭಾವಿ ಬಳಿ ಅಪಾಯದ ಸ್ಥಿತಿಯಲ್ಲಿ ವಿದ್ಯುತ್ ಕಂಬಗಳಿವೆ.ವಿದ್ಯುತ್ ಕಂಬಗಳ ತಳಭಾಗದಲ್ಲಿ ಸಿಮೆಂಟ್ ಉದುರುತ್ತಿವೆ .ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಭಯಭೀತಿಯಲ್ಲಿ ನಾಗರಬಾವಿ ಜನರು ಓಡಾಡುತ್ತಿದ್ದಾರೆ.ಅನಾಹುತ ಸಂಭವಿಸಿದ್ರೆ ಅಧಿಕಾರಿಗಳೇ ಹೊಣೆ ಎಂದು ಸಾರ್ವಜನಿಕರು ಹೇಳ್ತಿದ್ದು,ಅಪಾಯದ ಸ್ಥಿತಿಯ ವಿದ್ಯುತ್ ಕಂಬದ ದುರಸ್ಥಿಗೆ ಅಧಿಕಾರಿಗಳು ಮುಂದಾಗಿದ್ದಾರೆ.ಬೆಂಗಳೂರು ನಗರದಲ್ಲಿ ಜನರನ್ನ ಕೊಲ್ಲಲು ಯಮಸ್ವರೂಪಿ ವಿದ್ಯುತ್ ಕಂಬಗಳು ಕಾಯುತ್ತಿದೆ.