Select Your Language

Notifications

webdunia
webdunia
webdunia
webdunia

ಬುರುಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಬೆಳ್ತಂಗಡಿ ಠಾಣೆಯಲ್ಲಿ ತಿಮರೋಡಿ ದಿಢೀರ್‌ ಪ್ರತ್ಯಕ್ಷ

Mahesh Shetty Timarodi, Dharmasthala Burude case, Belthangadi Police Station

Sampriya

ಮಂಗಳೂರು , ಶುಕ್ರವಾರ, 29 ಆಗಸ್ಟ್ 2025 (12:23 IST)
ಮಂಗಳೂರು: ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಅದರ ಬೆನ್ನಲ್ಲೇ ಮಹೇಶ್ ಶೆಟ್ಟಿ ತಿಮರೋಡಿ ಇಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ಮಾಸ್ಕ್‌ಮ್ಯಾನ್‌ ವಿಚಾರಣೆಗೆ ಎಸ್‌ಐಟಿ ಕಚೇರಿಗೆ ಬರುತ್ತಿದ್ದ ಕಾರಿನಲ್ಲೇ ಮಹೇಶ್‌ ಶೆಟ್ಟಿ ತಿಮರೋಡಿ ಅವರು ಬೆಳ್ತಂಗಡಿ ಠಾಣಗೆ ಹಾಜರಾದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಅವರಿಗೆ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್‌ ಶೆಟ್ಟಿ ಅವರ ಬಂಧನದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.  

ಉಡುಪಿಯ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರು ತಿಮರೋಡಿ ಅವರ ಬಂಧನಕ್ಕೆ ಅವರ ಮನೆಗೆ ಹೋದ ಸಂದರ್ಭದಲ್ಲಿ ಬೆಂಬಲಿಗರ ಮೂಲಕ ತಡೆಯಲಾಗಿತ್ತು. ಈ ವೇಳೆ ಜಯಂತ್, ಗಿರೀಶ್ ಮಟ್ಟಣ್ಣೆವರ್, ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ 30 ಜನರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಈ ಕುರಿತ ವಿಚಾರಣೆಗೆ ಮಹೇಶ್‌ ಶೆಟ್ಟಿ ಹಾಜರಾಗಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ಸುಜಾತಾ ಭಟ್‌ ಕೂಡ ನಾಲ್ಕನೇ ದಿನವೂ ಎಎಸ್‌ಐ ವಿಚಾರಣೆಗೆ ಹಾಜರಾಗಿದ್ದಾರೆ. ಮೂರು ದಿನಗಳ ಕಾಲ ಸತತ ವಿಚಾರಣೆ ನಡೆಸಿದ್ದ ಅಧಿಕಾರಿಗಳು ನಾಲ್ಕನೇ ದಿನವೂ ಬರುವಂತೆ ಸೂಚಿಸಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮದೇ ಸರ್ಕಾರವನ್ನು ಬೈದ ಶಿವಾನಂದ ಪಾಟೀಲ್: ಸುಮ್ನೇ ಬಿಡುತ್ತಾ ಹೈಕಮಾಂಡ್