Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಮತ್ತೆ ರಾಜ್ಯದ ಸಿಎಂ ಆಗುತ್ತಾರೆ ಎಂದವರ್ಯಾರು ಗೊತ್ತಾ?

ಸಿದ್ದರಾಮಯ್ಯ ಮತ್ತೆ ರಾಜ್ಯದ ಸಿಎಂ ಆಗುತ್ತಾರೆ ಎಂದವರ್ಯಾರು ಗೊತ್ತಾ?
ಬಾಗಲಕೋಟೆ , ಶುಕ್ರವಾರ, 22 ಫೆಬ್ರವರಿ 2019 (08:26 IST)
ಬಾಗಲಕೋಟೆ : ಲೋಕಸಭಾ ಚುನಾವಣೆ ಬಳಿಕ ಅಂದರೆ 2019ರಲ್ಲೇ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಬಸವಕಲ್ಯಾಣ ಶಾಸಕ ಬಿ ನಾರಾಯಣ್ ರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾದಾಮಿಯಲ್ಲಿ ನಡೆದ ಜಿಲ್ಲಾಮಟ್ಟದ ಗಂಗಾಮತಸ್ಥ ಅಂಬಿಗರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು,’ ಲೋಕಸಭಾ ಚುನಾವಣೆಯಾದ ನಾಲ್ಕೈದು ತಿಂಗಳೊಳಗೆ ಸಿದ್ದರಾಮಯ್ಯ ನೂರಕ್ಕೆ ನೂರಷ್ಟು ಮತ್ತೆ ರಾಜ್ಯದ ಸಿಎಂ ಆಗುತ್ತಾರೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಒಪ್ಪಂದದ ಪ್ರಕಾರ ಕುಮಾರಸ್ವಾಮಿ ಅವರೇ 5 ವರ್ಷಗಳ ಸಿಎಂ. ಆದರೆ ನಮ್ಮ ಶ್ರೀಗಳ ಆಶೀರ್ವಾದ, ನಿಮ್ಮ ಆಶೀರ್ವಾದದಿಂದ  ಸಿದ್ದರಾಮಯ್ಯ  ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದ್ದಾರೆ.

 

ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಸಮರ್ಥ ನಾಯಕ, ಇಂತಹ ನಾಯಕ ನಮಗೆ ಸಿಕ್ಕಿದ್ದಾರೆ. ನನ್ನನ್ನು ಗುರುತಿಸಿ ಬಸವಕಲ್ಯಾಣದಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟಿದ್ದು ಸಿದ್ಧರಾಮಯ್ಯ ಅವರು. ಆಗ ಇಡೀ ಹಾಲುಮತ ಸಮಾಜ ಟೊಂಕಕಟ್ಟಿ ಮುಂದೆ ನಿಂತು ನನ್ನನ್ನು 18 ಸಾವಿರ ಮತದಿಂದ ಗೆಲ್ಲಿಸಿದೆ. ನಾವು ಸಿದ್ದರಾಮಯ್ಯಗೆ ಎಲ್ಲ ರೀತಿ ಶಕ್ತಿ ಕೊಡಬೇಕು ಎಂದು ಅವರು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ನಟ ದರ್ಶನ್ ತೆಗೆದ ಛಾಯಾಚಿತ್ರ ಪ್ರದರ್ಶನ; ಎಲ್ಲಿ ಗೊತ್ತಾ?