Publish Date: Thu, 21 Feb 2019 (17:57 IST)
Updated Date: Thu, 21 Feb 2019 (17:58 IST)
ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಿಕ್ ಮಾಡಿರುವ ಫೋಟೋಗಳನ್ನು ನೋಡಲು ಅಭಿಮಾನಿಗಳಿಗೊಂದು ಅವಕಾಶ ಒದಗಿ ಬಂದಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಪ್ರಿಯರು ಎಂಬುದು ಎಲ್ಲರಿಗೂ ಗೊತ್ತು. ನಟ ದರ್ಶನ್ ಒಳ್ಳೆಯ ಫೋಟೋಗ್ರಾಫರ್ ಆಗಿದ್ದಾರೆ. ಅರಣ್ಯ ಇಲಾಖೆ ಸಹಯೋಗದೊಂದಿಗೆ ಮೈಸೂರಿನಲ್ಲಿ ‘ಲೈಫ್ ಆನ್ ವೈಲ್ಡ್ ಸೈಡ್’ ಹೆಸರಿನ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಮಾರ್ಚ್ 1, 2 ಹಾಗೂ 3 ರಂದು ಸಂದೇಶ್ ಪ್ರಿನ್ಸ್ ಹೊಟೇಲ್ನಲ್ಲಿ ಚಿತ್ರನಟ ದರ್ಶನ್ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಮಾರ್ಚ್ 3 ರಂದು ವಿಶ್ವ ವನ್ಯ ಜೀವಿ ದಿನವಾಗಿದ್ದು, ದರ್ಶನ್ ಆ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.