Publish Date: Wed, 16 Jan 2019 (07:57 IST)
Updated Date: Wed, 16 Jan 2019 (08:00 IST)
ಬೆಂಗಳೂರು : ಕಾಮುಕನೊಬ್ಬ ತಡರಾತ್ರಿ ಮಹಿಳೆಯೊಬ್ಬಳಿಗೆ ವಿಡಿಯೋ ಕಾಲ್ ಮಾಡಿ ಮರ್ಮಾಂಗ ಪ್ರದರ್ಶನ ಮಾಡಿ ವಿಕೃತಿ ಮರೆದಿದ್ದಾನೆ.
ಖಾಸಗಿ ಕಂಪನಿಯ ಮಹಿಳಾ ಮ್ಯಾನೇಜರ್ ಒಬ್ಬರು ಜ.12ರಂದು ನಸುಕಿನ ಜಾವ ಸುಮಾರು 2:47ಕ್ಕೆ ನಿದ್ರಿಸುತ್ತಿದ್ದ ವೇಳೆ ಅಪರಿಚಿತನೊಬ್ಬ ವಿಡಿಯೋ ಕಾಲ್ ಮಾಡಿ ಆಕೆಯ ಮುಂದೆ ಬೆತ್ತಲಾಗಿ ನಿಂತಿದ್ದಾನೆ. ಆಗ ಆಕೆ ಕಾಲ್ ಕಟ್ ಮಾಡಿದ್ದಾಳೆ. ನಂತರ ಕಾಮುಕ ಮತ್ತೆ ವಿಡಿಯೋ ಕಾಲ್ ಮಾಡಿ ಮರ್ಮಾಂಗ ಪ್ರದರ್ಶನ ಮಾಡಿ ಮಹಿಳೆಗೆ ಅಸಭ್ಯವಾಗಿ ನಿಂದಿಸಿದ್ದಾನೆ.
ಈ ಘಟನೆಯಿಂದ ನೊಂದ ಮಹಿಳೆ ಬೆಂಗಳೂರು ಸಿಟಿ ಪೊಲೀಸ್ ಪೇಜ್ ನಲ್ಲಿ ತನ್ನ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾಳೆ. ಅಲ್ಲದೇ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.