Select Your Language

Notifications

webdunia
webdunia
webdunia
webdunia

ಸಿದ್ಧರಾಮಯ್ಯ ಭಾಷಣ ಕೇಳಿ ಭಾವುಕರಾದ ಸಿಎಂ ಯಡಿಯೂರಪ್ಪ

ಸಿದ್ಧರಾಮಯ್ಯ ಭಾಷಣ ಕೇಳಿ ಭಾವುಕರಾದ ಸಿಎಂ ಯಡಿಯೂರಪ್ಪ
ಬೆಂಗಳೂರು , ಶುಕ್ರವಾರ, 28 ಫೆಬ್ರವರಿ 2020 (09:50 IST)
ಬೆಂಗಳೂರು: ಸಿಎಂ ಯಡಿಯೂರಪ್ಪ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.


ರಾಜಕೀಯ ವೈರುಧ್ಯ ಮರೆತು ಯಡಿಯೂರಪ್ಪ ಅಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ದರಾಮಯ್ಯ ಭಾಷಣ ಕೇಳಿ ಸ್ವತಃ ಸಿಎಂ ಬಿಎಸ್ ವೈ ಭಾವುಕರಾದರು. ಬಳಿಕ ಸಿದ್ಧರಾಮಯ್ಯರಿಂದಲೇ ಈ ಕಾರ್ಯಕ್ರಮಕ್ಕೆ ಕಳೆ ಬಂತು ಎಂದರು.

ತಮ್ಮ ಭಾಷಣದ ವೇಳೆ ಸಿದ್ದರಾಮಯ್ಯ ಬಿಎಸ್ ವೈಗೆ ಅಭಿನಂದನೆ ಸಲ್ಲಿಸುತ್ತಾ, ನಮ್ಮಿಬ್ಬರ ರಾಜಕೀಯ ಸಿದ್ಧಾಂತಗಳು ಬೇರೆಯೇ ಇರಬಹುದು. ಆದರೆ ಅದೆಲ್ಲಕ್ಕಿಂತಲೂ ಮಾನವ ಸಂಬಂಧ ದೊಡ್ಡದು. ಅವರ ರಾಜಕೀಯ ಹೋರಾಟದಿಂದಲೇ ಮೇಲೆ ಬಂದವರು. 100 ವರ್ಷಕ್ಕೂ ಹೆಚ್ಚು ಕಾಲ ಅವರಿಗೆ ದೇವರು ಆರೋಗ್ಯ, ಆಯಸ್ಸು ಕೊಡಲಿ ಎಂದು ಸಿದ್ಧರಾಮಯ್ಯ ಹಾರೈಸಿದಾಗ ವೇದಿಕೆಯಲ್ಲಿದ್ದ ಸಿಎಂ ಯಡಿಯೂರಪ್ಪ ಭಾವುಕರಾದರಲ್ಲದೆ, ಕಣ್ಣಂಚಲ್ಲಿ ಬಂದ ಹನಿ ನೀರನ್ನು ಒರೆಸಿಕೊಂಡ ದೃಶ್ಯ ಕಂಡುಬಂತು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಯುವಕ ಸಾವು