Select Your Language

Notifications

webdunia
webdunia
webdunia
webdunia

ಬಜೆಟ್ ನಲ್ಲಿ ಬಂಪರ್ ನ್ಯೂಸ್ ಕೊಟ್ಟ ಸಿಎಂ ಯಡಿಯೂರಪ್ಪ ; ಕಾಂಗ್ರೆಸ್ ಗೆ ಕೈಕೊಟ್ಟಿದ್ದೇ ಒಳ್ಳೆದಾಯ್ತು ಎಂದ ಸಚಿವ

ಬಜೆಟ್ ನಲ್ಲಿ ಬಂಪರ್ ನ್ಯೂಸ್ ಕೊಟ್ಟ ಸಿಎಂ ಯಡಿಯೂರಪ್ಪ ; ಕಾಂಗ್ರೆಸ್ ಗೆ ಕೈಕೊಟ್ಟಿದ್ದೇ ಒಳ್ಳೆದಾಯ್ತು ಎಂದ ಸಚಿವ
ಹಾವೇರಿ , ಸೋಮವಾರ, 24 ಫೆಬ್ರವರಿ 2020 (18:10 IST)
ರಾಜ್ಯ ಬಜೆಟ್ ನಲ್ಲಿ ಬಂಪರ್ ಕೊಡುಗೆ ಕೊಡೋದಾಗಿ ಸಿಎಂ ಹೇಳಿರೋದು ಕುತೂಹಲ ಕೆರಳಿಸಿದೆ.

ಹಾವೇರಿ ಜಿಲ್ಲೆಯ ವಿವಿಧ ಏತ ನೀರಾವರಿ ಯೋಜನೆಗಳಿಗೆ ಈಗಾಗಲೇ ಒಂದು ಸಾವಿರದಾ ಐದನೂರು ಕೋಟಿ  ರೂಪಾಯಿಗಳ ತಾಂತ್ರಿಕ ಅನುಮೋದನೆ ದೊರೆತು ಕೆಲಸ ಆರಂಭಿಸಲಾಗಿದೆ. ಹಾವೇರಿಯಲ್ಲಿ ಮೆಗಾ ಡೈರಿ ಸ್ಥಾಪಿಸುವ ಕುರಿತು ಬರುವ ರಾಜ್ಯ ಬಜೆಟ್ ನಲ್ಲಿ ಚರ್ಚಿಸಲಾಗುವುದು. ಹೀಗಂತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಹಾವೇರಿ ಜಿಲ್ಲಾಡಳಿತ ಹಾಗೂ ಕರ್ನಾಟಕ ನೀರಾವರಿ ನಿಗಮ ನಿಯಮಿತ ಸಹಯೋಗದಲ್ಲಿ ಜಿಲ್ಲೆಯ ಬಾಳಂಬೀಡ ಗ್ರಾಮದಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಡಿಯಲ್ಲಿ ಬರುವ ಬಾಳಂಬೀಡ ಹಾಗೂ ಹಿರೇಕಾಂಶಿಯ ಒಟ್ಟು 239 ಕೆರೆಗಳಿಗೆ ವರದಾ ನದಿಯಿಂದ ನೀರನ್ನು ಎತ್ತಿ ಕೆರೆಗಳನ್ನು ತುಂಬಿಸುವ 504 ಕೋಟಿ ರೂಪಾಯಿ ವೆಚ್ಚದ ನೀರಾವರಿ ಯೋಜನೆಯ ಅಡಿಗಲ್ಲು ಸಮಾರಂಭ ಉದ್ಘಾಟಿಸಿದರು.

ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ಸಂಪನ್ಮೂಲಗಳ ಕ್ರೂಢಿಕರಣದ ಜೊತೆಗೆ ಅವುಗಳ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗುವುದು ಅಂತ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ರೈತರ ಏಳಿಗೆಗಾಗಿ ರಾಜೀನಾಮೆ ನೀಡಿ ಬಿಜೆಪಿ ಸರಕಾರ ರಚನೆಗೆ ನೆರವಾಗಿದ್ದು ಸಾರ್ಥಕವಾಗಿದೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ವಸತಿ ಶಾಲೆಯ ಕಂಪೌಂಡ್ ವಿಷಯಕ್ಕೆ ರೈತರು ಫುಲ್ ಗರಂ