ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಂಪೌಂಡ್ ವಿಷಯಕ್ಕೆ ಇದೀಗ ರೈತರು ಗರಂ ಆಗಿದ್ದಾರೆ.
									
										
								
																	
ಮಂಡ್ಯದ ಮಾದಾಪುರ ಗ್ರಾಮದಲ್ಲಿ ಜಮೀನುಗಳಿಗೆ ಹೋಗಲು ರಸ್ತೆಯನ್ನು ಬಿಡದೇ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಈ ಕ್ರಮ ಖಂಡಿಸಿ ಕೆ.ಆರ್. ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
									
			
			 
 			
 
 			
			                     
							
							
			        							
								
																	ಗ್ರಾಮದ ನೂರಾರು ಎಕರೆ ಜಮೀನಿಗೆ ಹೋಗಿ ಬರಲು, ಕೃಷಿ ಚಟುವಟಿಕೆಗಳನ್ನು ಮಾಡಲು ಕಂಪೌಂಡ್ ನಿರ್ಮಾಣದಿಂದ ತೊಂದರೆಯಾಗುತ್ತದೆ. ಆದ್ದರಿಂದ ಕೂಡಲೇ ಕಾಮಗಾರಿಯನ್ನು ನಿಲ್ಲಿಸಿ ರಸ್ತೆಗೆ ಅಗತ್ಯವಾಗಿ ಬೇಕಾಗಿರುವ ಭೂಮಿಯನ್ನು ಬಿಡಿಸಿಕೊಟ್ಟು ನಂತರವಷ್ಟೇ ಕಾಮಗಾರಿ ನಡೆಸಬೇಕು. ಹೀಗಂತ ರೈತರ ಆಗ್ರಹಕ್ಕೆ ಮಣಿದ ತಹಶೀಲ್ದಾರ್ ಎಂ.ಶಿವಮೂರ್ತಿ, ಜಿಲ್ಲಾಧಿಕಾರಿಗಳ ಗಮನಕ್ಕೆ ಸಮಸ್ಯೆಯನ್ನು ತಂದು ಸಮಸ್ಯೆಗೆ ಪರಿಹಾರ ಕಂಡುಹಿಡಿಯುವವರೆಗೆ ಕಾಮಗಾರಿಯನ್ನು ನಿಲ್ಲಿಸುವಂತೆ ಸಂಬಂಧಿಸಿದ ಮೊರಾರ್ಜಿ ವಸತಿಶಾಲೆಯ ಎಂಜಿನಿಯರ್ ಗೆ ಆದೇಶ ನೀಡಿದರು.