Publish Date: Sun, 23 Feb 2020 (17:53 IST)
Updated Date: Sun, 23 Feb 2020 (17:55 IST)
ಫೆ. 27 ರಂದು ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅದೇ ದಿನ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ.
ಕಾವೇರಿ ನಿವಾಸದಲ್ಲಿ ನವೀಕರಣ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಫೆ. 27 ರಂದು ತಮ್ಮ 78 ನೇ ವಸಂತಕ್ಕೆ ಕಾಲಿಡುಲಿರೋ ಬಿ.ಎಸ್.ಯಡಿಯೂರಪ್ಪ ಅಂದೇ ತಮ್ಮ ವಾಸ್ತವ್ಯವನ್ನು ಅಧಿಕೃತವಾಗಿ ಕಾವೇರಿ ನಿವಾಸಕ್ಕೆ ಶಿಫ್ಟ್ ಮಾಡಲಿದ್ದಾರೆ.
ನವೀಕರಣ ಕೆಲಸ ಪರಿಶೀಲನೆ ನಡೆಸಿದ ಬಿ.ಎಸ್.ಯಡಿಯೂರಪ್ಪ ಕೆಲಕಾಲ ಕಾವೇರಿ ನಿವಾಸದಲ್ಲಿ ವೀಕ್ಷಣೆ ಮಾಡಿದ್ದಾರೆ.
ತಮ್ಮ ಜನ್ಮದಿನದಂದೇ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ.