Select Your Language

Notifications

webdunia
webdunia
webdunia
webdunia

ಸರಕಾರವೇ ಇನ್ಮುಂದೆ ಮದುವೆ ಮಾಡಿಸುತ್ತೆ

ಸರಕಾರವೇ ಇನ್ಮುಂದೆ ಮದುವೆ ಮಾಡಿಸುತ್ತೆ
ಬೆಳಗಾವಿ , ಮಂಗಳವಾರ, 25 ಫೆಬ್ರವರಿ 2020 (18:57 IST)
ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲು ಸರಕಾರ ಮುಂದಾಗಿದೆ.
 

ರಾಜ್ಯದ 'ಎ' ಶ್ರೇಣಿಯ ದೇವಸ್ಥಾನಗಳು ಮಾತ್ರವಲ್ಲದೇ ಸಂಪನ್ಮೂಲ ಕ್ರೋಢೀಕರಿಸಿ 'ಬಿ' ಮತ್ತು 'ಸಿ' ಶ್ರೇಣಿಯ ದೇವಸ್ಥಾನಗಳಲ್ಲಿಯೂಡ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಹೀಗಂತ ಮುಜರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಬಡ ಕುಟುಂಬಗಳಿಗೆ ಅನುಕೂಲ ಕಲ್ಪಿಸಬೇಕು ಎಂಬ ಉದ್ದೇಶದಿಂದ ಪ್ರತಿ ಜೋಡಿಗೆ ಎಂಟು ಗ್ರಾಮ್ ಬಂಗಾರ, ವಧುವಿನ ಖಾತೆಗೆ ಹತ್ತು ಸಾವಿರ ಮತ್ತು ವರನಿಗೆ ಐದು ಸಾವಿರ ರೂಪಾಯಿ ನೀಡವುದು ಸೇರಿದಂತೆ ಒಂದು ಜೋಡಿಗೆ 55 ಸಾವಿರ ರೂಪಾಯಿ ವೆಚ್ಚವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತಿದೆ.

ವಿವಾಹಕ್ಕೆ ಆಗಮಿಸುವ ವಧು-ವರರ ಎಲ್ಲ ಕುಟುಂಬ ವರ್ಗದವರಿಗೆ ಸೂಕ್ತ ಊಟೋಪಚಾರದ‌ ವ್ಯವಸ್ಥೆ ಕಲ್ಪಿಸುವ ಜತೆಗೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಹೊಸದಾಗಿ ಅಂಗನವಾಡಿ ಕಾರ್ಯಕರ್ತೆಯರ ಕೈಗೆ ಸಿಗೋದೇನು?