Publish Date: Wed, 19 Feb 2020 (16:38 IST)
Updated Date: Wed, 19 Feb 2020 (16:40 IST)
ಬಿಜೆಪಿ ಸರಕಾರ ಬೀಳಬಾರದು. ಈ ಸರಕಾರ ಕೊನೆಯಾಗಬೇಕು ಅಂತ ನಾವು ಬಯಸೋದಿಲ್ಲ.
ಹೀಗಂತ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಮುಂದುವರಿಯಬೇಕು. ಹೀಗಂತ ತಾವು ಬಯಸೋದಾಗಿ ದೇವೇಗೌಡರು ಹೇಳಿದ್ದಾರೆ.
ರಾಜ್ಯ ಸರಕಾರ ಹಾಗೂ ಭ್ರಷ್ಟಾಚಾರ, ಅಭಿವೃದ್ಧಿ ವಂಚಿತವಾಗಿರೋದ್ರ ಬಗ್ಗೆ ಸದನದಲ್ಲಿ ಕುಮಾರಸ್ವಾಮಿ, ಸಿದ್ದರಾಮಯ್ಯ ಪ್ರಶ್ನೆ ಮಾಡಲಿದ್ದಾರೆ ಅಂತ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ.