Publish Date: Wed, 19 Feb 2020 (10:24 IST)
Updated Date: Wed, 19 Feb 2020 (10:25 IST)
ತುಮಕೂರು : ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಕಾಡಸಿದ್ದೇಶ್ವರ ಮಠಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ನೀಡಿದ್ದಾರೆ.
ಇಂದು ದೇವಾಲಯದ ವತಿಯಿಂದ ಶಿಲಾನ್ಯಾಸ ಹಾಗೂ ಧಾರ್ಮಿಕ ಸಭೆಯನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಸಿಎಂ ಭಾಗಿಯಾಗಲಿದ್ದಾರೆ.
ಹಾಗೇ ಮೃತ್ಯುಂಜಯ ಹೋಮ, ರುದ್ರ ಹೋಮದಲ್ಲಿಯೂ ಕೂಡ ಸಿಎಂ ಭಾಗವಹಿಸಲಿದ್ದಾರೆ. ಸಿಎಂ ಗೆ ಸಚಿವ ವಿ.ಸೋಮಣ್ಣ ಸಾಥ್ ನೀಡಿದ್ದಾರೆ ಎನ್ನಲಾಗಿದೆ.