Publish Date: Wed, 19 Feb 2020 (11:00 IST)
Updated Date: Wed, 19 Feb 2020 (11:02 IST)
ದಾವಣಗೆರೆ : ದಾವಣಗೆರೆ ಮೇಯರ್-ಉಪಮೇಯರ್ ಚುನಾವಣೆ ಹಿನ್ನಲೆ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿ ಅಜಯ್ ಕುಮಾರ್ ಸ್ಪರ್ಧಿಸಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ದೇವರಮನೆ ಶಿವಕುಮಾರ್ ಕಣಕ್ಕೀಳಿಯಲಿದ್ದಾರೆ. ಹಾಗೇ ಈಗಾಗಲೇ ಮೇಯರ್ ಹುದ್ದೆ ಆಕಾಂಕ್ಷಿಗಳು ಪಾಲಿಕೆ ಪ್ರವೇಶಿಸಿದ್ದಾರೆ.
ಅಲ್ಲದೇ ಮತದಾನಕ್ಕೆ ಎಂಎಲ್ ಸಿ ಗಳು ಹೆಲಿಕಾಪ್ಟರ್ ನಲ್ಲಿ ಆಗಮಿಸಿದದ್ದಾರೆ. ಆದರೆ ಕಾಂಗ್ರೆಸ್ ನ ಮೂವರು ಸದಸ್ಯರು ಪಾಲಿಕೆಗೆ ಬರುವುದು ವಿಳಂಬವಾಗಿದ್ದು, ಇದರಿಂದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆಯಾ? ಎಂಬ ಅನುಮಾನ ವ್ಯಕ್ತವಾಗಿದೆ.