Select Your Language

Notifications

webdunia
webdunia
webdunia
webdunia

ನಾನೆಲ್ಲಿಂದ ಈ ಯುವತಿಗೆ ರಕ್ಷಣೆ ಕೊಡಲಿ? ಸಿದ್ದರಾಮಯ್ಯ

ನಾನೆಲ್ಲಿಂದ ಈ ಯುವತಿಗೆ ರಕ್ಷಣೆ ಕೊಡಲಿ? ಸಿದ್ದರಾಮಯ್ಯ
ಬೆಂಗಳೂರು , ಸೋಮವಾರ, 29 ಮಾರ್ಚ್ 2021 (11:11 IST)
ಬೆಂಗಳೂರು: ಸಿಡಿ ಲೇಡಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸಿ ರಕ್ಷಣೆ ಕೊಡಿಸಿ ಎಂದಿರುವುದರ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.


ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದಾಗ ಸಿದ್ದರಾಮಯ್ಯ ‘ನಾನೆಲ್ಲಿಂದ ಆ ಯುವತಿಗೆ ರಕ್ಷಣೆ ಕೊಡಲಿ? ನಾನು ಸರ್ಕಾರಕ್ಕೆ ಹೇಳಬಹುದು ರಕ್ಷಣೆ ಕೊಡಿ ಅಂತ.  ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಬೇಕು. ಅವರು ಮೌನವಾಗಿರುವುದು ನೋಡಿದರೆ ಅವರದ್ದು ಏನೋ ಹುಳುಕಿರಬೇಕು’ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಇನ್ನು, ಶಾಸಕ ರಮೇಶ್ ಜಾರಕಿಹೊಳಿ ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಯುವತಿ ಕುರಿತಾದ ಹಲವು ಪ್ರಶ್ನೆಗಳನ್ನು ರಮೇಶ್ ಜಾರಕಿಹೊಳಿಗೆ ಕೇಳಲಾಗುತ್ತಿದೆ ಎನ್ನಲಾಗಿದೆ. ಈ ಮೊದಲು ಎಸ್ ಐಟಿ ಕೂಡಾ ರಮೇಶ‍್ ಜಾರಕಿಹೊಳಿಯವರನ್ನು ವಿಚಾರಣೆ ನಡೆಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಲಾಕ್ ಡೌನಾ? ಬೇಡವೇ ಬೇಡ ಎಂದ ತಜ್ಞರು