Select Your Language

Notifications

webdunia
webdunia
webdunia
webdunia

ಮುಖ್ಯ ನ್ಯಾಯಮೂರ್ತಿಗೆ ಈಮೇಲ್ ಮಾಡಿದ ಸಿಡಿ ಲೇಡಿ

ಮುಖ್ಯ ನ್ಯಾಯಮೂರ್ತಿಗೆ ಈಮೇಲ್ ಮಾಡಿದ ಸಿಡಿ ಲೇಡಿ
ಬೆಂಗಳೂರು , ಸೋಮವಾರ, 29 ಮಾರ್ಚ್ 2021 (09:36 IST)
ಬೆಂಗಳೂರು: ರಮೇಶ್ ಜಾರಕಿಹೊಳಿ ಪ್ರಕರಣದ ಸಿಡಿ ಲೇಡಿ ಈಗ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೇ ರಕ್ಷಣೆ ಕೋರಿ ಈಮೇಲ್ ಮಾಡಿದ್ದಾಳೆ.


ಇದುವರೆಗೂ ಎಸ್ ಐಟಿ ಅಧಿಕಾರಿಗಳಿಗೆ ಆಕೆಯನ್ನು ಪತ್ತೆ ಮಾಡಲಾಗಿಲ್ಲ. ಆದರೆ ಯುವತಿ ಮಾತ್ರ ವಿಡಿಯೋ ಸಂದೇಶಗಳನ್ನು ನೀಡುತ್ತಿದ್ದಾಳೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ನ್ಯಾಯಮೂರ್ತಿಗಳಿಗೇ ಈಮೇಲ್ ಮಾಡಿ ತನಗೆ ರಕ್ಷಣೆ ಕೋರಿದ್ದಾಳೆ.

ರಮೇಶ್ ಜಾರಕಿಹೊಳಿ ಪ್ರಭಾವಿ ಶಾಸಕರು. ನನ್ನ ತಂದೆ-ತಾಯಿಗೆ ಬೆದರಿಕೆ ಹಾಕಿದ್ದಾರೆ. ನನಗೂ ಪ್ರಾಣ ಬೆದರಿಕೆಯಿದೆ. ಹೀಗಾಗಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು ಎಂದು ಈಮೇಲ್ ನಲ್ಲಿ ಹೇಳಿದ್ದಾಳೆ.  ನನ್ನ ಪೋಷಕರಿಗೆ ಒತ್ತಡ ಹಾಕಿ ಕಿಡ್ನ್ಯಾಪ್ ಕೇಸ್ ಹಾಕಿಸಿದ್ದಾರೆ. ಡಿವೈಎಸ್ ಪಿ ಕಟ್ಟಿಮನಿ ನಮ್ಮ ಕುಟುಂಬದ ಮೇಲೆ ಒತ್ತಡ ಹಾಕುತ್ತಿದ್ದಾರೆ.  ಅವರು ರಮೇಶ್ ಜಾರಕಿಹೊಳಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕ್ಷಣದಲ್ಲೂ ರಮೇಶ್ ಜಾರಕಿಹೊಳಿ ನನ್ನನ್ನು ಕೊಲ್ಲಬಹುದು. ಹೀಗಾಗಿ ನಮಗೆ ರಕ್ಷಣೆ ಬೇಕು’ ಎಂದು ಯುವತಿ ಈಮೇಲ್ ನಲ್ಲಿ ಪ್ರಸ್ತಾಪಿಸಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರನ್ನು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದ ಆಶಾ ಕಾರ್ಯಕರ್ತೆ ಅರೆಸ್ಟ್