Select Your Language

Notifications

webdunia
webdunia
webdunia
webdunia

ಮಹಾನಾಯಕನ ಹೆಸರನ್ನು ಜಾರಕಿಹೊಳಿ ಪ್ರಸ್ತಾಪಿಸಿದ ಬಗ್ಗೆ ಡಿಕೆಶಿ ಹೇಳಿದ್ದೇನು?

ಮಹಾನಾಯಕನ ಹೆಸರನ್ನು ಜಾರಕಿಹೊಳಿ ಪ್ರಸ್ತಾಪಿಸಿದ ಬಗ್ಗೆ ಡಿಕೆಶಿ ಹೇಳಿದ್ದೇನು?
ಬೆಂಗಳೂರು , ಭಾನುವಾರ, 28 ಮಾರ್ಚ್ 2021 (12:46 IST)
ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮಹಾನಾಯಕನ ಹೆಸರನ್ನು ರಮೇಶ್ ಪ್ರಸ್ತಾಪಿಸಿದ ವಿಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಪ್ರತಿಕ್ರಿಯಿಸಿದ್ದಾರೆ.

ನನ್ನ ಹೆಸರು ಪ್ರಸ್ತಾಪ ಮಾಡ್ಲಿ ಬಿಡ್ಲಿ. ಯುವತಿ ಪೋಷಕರಾದ್ರು ಹೇಳಲಿ, ಯಾರಾದ್ರೂ ಹೇಳಲಿ. ಎಸ್ ಐಟಿ ಇದೆ, ತನಿಖೆಯಾಗಲಿ ಬಿಡಿ. ಕಾನೂನು ಇದೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತೆ. ಡಿಕೆ ಶಿವಕುಮಾರ್ ವಿರುದ್ಧ ಅವಾಚ್ಯ ಪದ ಬಳಕೆ ವಿಚಾರ ಅವರ ಸಂಸ್ಕೃತಿ ಅವರು ಮಾತಾಡ್ತಾರೆ ಎಂದು ಹೇಳಿದ್ದಾರೆ.

ಕನಕಪುರದಲ್ಲಿ ಸ್ಪರ್ಧಿಸುವ ಬಗ್ಗೆ ರಮೇಶ್ ಹೇಳಿಕೆ ವಿಚಾರ ಒಳ್ಳೆಯದಾಗಲಿ. ಬಹಳ ಸಂತೋಷದಿಂದ ಸ್ವೀಕರಿಸುತ್ತೇನೆ. ಆ ಯುವತಿ ನನ್ನ ಬಳಿ ಬಂದಿಲ್ಲ. ನನ್ನನ್ನು ಭೇಟಿಯಾಗಿಲ್ಲ. ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾಳೆ ಅಷ್ಟೇ. ಮಾಧ್ಯಮಗಳ ಮೂಲಕ ಯುವತಿ ಸಹಾಯ ಕೇಳಿದ್ದಾಳಷ್ಟೇ ನನಗೂ, ಈ ಸಿಡಿ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.    

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬಿಎಸ್ ವೈ ಸಿಡಿ ರಮೇಶ್ ಜಾರಕಿಹೊಳಿ ಬಳಿ ಇದೆ ಎಂದು ಕೆಪಿಸಿಸಿ ವಕ್ತಾರ