Select Your Language

Notifications

webdunia
webdunia
webdunia
Friday, 11 April 2025
webdunia

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆ ಸುರೇಶ್

ಬೆಂಗಳೂರು
ಬೆಂಗಳೂರು , ಭಾನುವಾರ, 28 ಮಾರ್ಚ್ 2021 (11:46 IST)
ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿಧಂತೆ  ಇದು ಸಿಡಿ ಸರ್ಕಾರ ಎಂದು ಡಿಕೆ ಸುರೇಶ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿಡಿ ಪ್ರಕರಣದ ತನಿಖೆ  ದಿಕ್ಕು ತಪ್ಪುತ್ತಿದೆ. ಸರ್ಕಾರ ಆರೋಪಿಯನ್ನು ರಕ್ಷಣೆ ಮಾಡುತ್ತಿದೆ. ಕೇಸ್ ಮುಚ್ಚಿ ಹಾಕಲು ಸರ್ಕಾರ ಹೊರಟಿದೆ. ಕಾನೂನು ಸುವ್ಯವಸ್ಥೆ ಕೈ ಚೆಲ್ಲಿ ಕುಳಿತಿದ್ದಾರೆ. ಈ ಸರ್ಕಾರ  ಅಭಿವೃದ್ಧಿ , ನೀರಿನ ಸಮಸ್ಯೆ ಬಗ್ಗೆ ಚಿಂತಿಸುತ್ತಿಲ್ಲ ಅಕ್ರಮ ಚಟುವಟಿಕೆಯ ಮುಚ್ಚಿಕೊಂಡು ಸರ್ಕಾರ ನಡೆಸ್ತಿದ್ದಾರೆ.

ಸಂತ್ರಸ್ತ ಯುವತಿಗೆ ರಕ್ಷಣೆ ಕೊಡಬೇಕು. ಕಾಂಗ್ರೆಸ್ ಆ ಮಹಿಳೆಯ ಪರ ನಿಲ್ಲಲಿದೆ.   ಮಗಳ ವಯಸ್ಸಿನ ಹೆಣ್ಣು ಮಗಳಿಗಾದ ನೋವಿನ ಬಗ್ಗೆ  ಸರ್ಕಾರ, ಎಸ್ ಐಟಿ ಯಾರೂ ಸಹ ಚರ್ಚೆ ಮಾಡುತ್ತಿಲ್ಲ. ಎಸ್ ಐಟಿಗೆ ಫ್ರೇಮ್ ವರ್ಕ್ ಇಲ್ಲ. ಇದು ಪ್ರಕರಣ ಮುಚ್ಚಿಹಾಕಲು ಕುತಂತ್ರ ಅಷ್ಟೇ. ಗೃಹ ಸಚಿವರು ಕಾನೂನು ಸುವ್ಯವಸ್ಥೆ ಕೈಚೆಲ್ಲಿ ಕುಳಿತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈವ್ ಆಗಿ ವಿಷ ಸೇವಿಸಿ ಜೀವಕೊನೆಗೊಳಿಸಲು ಯತ್ನಿಸಿದ ಕುಟುಂಬ