Select Your Language

Notifications

webdunia
webdunia
webdunia
Tuesday, 8 April 2025
webdunia

ಬಿಜೆಪಿಯವರನ್ನು ಬ್ರಿಟಿಷರಿಗೆ ಹೋಲಿಸಿದ ಸಿದ್ದರಾಮಯ್ಯ

ಬೆಂಗಳೂರು
ಬೆಂಗಳೂರು , ಶುಕ್ರವಾರ, 28 ಜೂನ್ 2019 (10:51 IST)
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯನ್ನು ಈಸ್ಟ್​ ಇಂಡಿಯಾ ಕಂಪನಿಗೆ ಹೋಲಿಸಿ ಇದೀಗ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.




ರಾಜ್ಯದಲ್ಲಿ ಮೈತ್ರಿ ಸರ್ಕಾರ ಜಾರಿಗೆ ಬಂದಾಗಿನಿಂದ ರಾಜ್ಯದ ರಾಜಕೀಯದಲ್ಲಿ ಗಲಾಟೆ ಗದ್ದಲಗಳು ನಡೆಯುತ್ತಲೆ ಇದೆ. ಮೈತ್ರಿ ನಾಯಕರ ವಿರುದ್ಧ ಬಿಜೆಪಿಯವರು  ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತ ಮೈತ್ರಿ ಸರ್ಕಾರ ಉರುಳಿಸಲು ಅನೇಕ ಕಸರತ್ತುಗಳನ್ನು ನಡೆಸುತ್ತಲೇ ಇದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಟ್ವೀಟರ್ ನಲ್ಲಿ ಕಿಡಿಕಾರಿದ್ದಾರೆ.


‘ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಬಿಜೆಪಿ ನಡುವೆ ಸಾಕಷ್ಟು ಸಾಮ್ಯತೆಯಿದೆ. ಬ್ರಿಟಿಷರಿಗೆ ಭಾರತೀಯರನ್ನು ಸೋಲಿಸುವುದು ಬಹಳ ಕಷ್ಟ ಎಂದು ಗೊತ್ತಾದ್ದರಿಂದ ನಮ್ಮ ಒಡೆದು ನಮ್ಮಲ್ಲೇ ಜಗಳ ತಂದಿಟ್ಟು ತಮ್ಮ ಕೆಲಸ ಸಾಧಿಸಿಕೊಂಡರು. ಬ್ರಿಟಿಷರ ರೀತಿಯಲ್ಲೇ ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಿಜೆಪಿಗೂ ಈಸ್ಟ್​ ಇಂಡಿಯಾ ಕಂಪನಿಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ ಎಂದು ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಅಮೇರಿಕಾದತ್ತ ಪ್ರಯಾಣ ಬೆಳೆಸಲಿರುವ ಸಿಎಂ ಕುಮಾರಸ್ವಾಮಿ. ಕಾರಣವೇನು ಗೊತ್ತಾ?