Publish Date: Mon, 11 Feb 2019 (10:46 IST)
Updated Date: Mon, 11 Feb 2019 (10:49 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಬೇಕೆಂದು ಮಾಜಿ ಸಿಎಂ ಆಗ್ರಹ ಮಾಡಿದ್ದಾರೆ. ಆಪರೇಷನ್ ಕಮಲ ಕುರಿತ ಆಡಿಯೋದಲ್ಲಿ ಮಾತನಾಡಿದ್ದು ಸಾಬೀತಾದರೆ ರಾಜೀನಾಮೆ ಕೊಡುವೆ ಎಂದಿದ್ದ ಅವರು, ತಮ್ಮ ಮಾತನ್ನು ರಾಜೀನಾಮೆ ಕೊಟ್ಟು ಉಳಿಸಿಕೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಬಿ.ಎಸ್.ವೈ ರಾಜೀನಾಮೆಗೆ ಒತ್ತಾಯ ಮಾಡಿದ್ದಾರೆ.
ಯಡಿಯೂರಪ್ಪ ಸಾರ್ವಜನಿಕ ಜೀವನದಲ್ಲಿರಲು ಯಡಿಯೂರಪ್ಪ ನೈತಿಕತೆ ಉಳಿಸಿಕೊಂಡಿಲ್ಲ. ಕೂಡಲೇ ಅವರು ರಾಜೀನಾಮೆ ಕೊಡಬೇಕು. ಆಡಿಯೋ ಸಾಬೀತಾದ್ರೆ ರಾಜಿನಾಮೆ ಕೊಡ್ತಿನಿ ಎಂದಿದ್ದರು. ಈಗ ಆ ಮಾತನ್ನು ಪಾಲಿಸಲಿ ಎಂದಿದ್ದಾರೆ.
ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ. ಅದು ಮಿಮಿಕ್ರಿ ಎಂದು ಮೊದಲು ಹೇಳಿದ್ದರು. ಈಗ ಆಡಿಯೋ ನನ್ನದೇ ಎನ್ನುತ್ತಿದ್ದಾರೆ ಎಂದ ಅವರು, ಪ್ರಧಾನಿ ವಿರುದ್ಧವೂ ಹರಿಹಾಯ್ದರಯ, ರೈತರ ಬಗ್ಗೆ ಕಾಳಜಿ ತೋರುವ ಪಿಎಂ, ರೈತರ ಸಾಲವನ್ನು ಏಕೆ ಮನ್ನಾ ಮಾಡಿಲ್ಲ ಎಂದು ದೂರಿದರು.