ಇಂದು ಸದನದಲ್ಲಾಗುತ್ತಾ ಸಿಡಿ ಬ್ಲಾಸ್ಟ್?

ಸೋಮವಾರ, 11 ಫೆಬ್ರವರಿ 2019 (10:13 IST)
ಒಂದೆಡೆ ಸರಕಾರದ ವಿರುದ್ಧ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಲು ಮುಂದಾಗಿದ್ದರೆ, ಮತ್ತೊಂದೆಡೆ ಬಿ.ಎಸ್.ವೈ ಆಡಿಯೋ ವಿಷಯವನ್ನು ಜೆಡಿಎಸ್ ಸದನದಲ್ಲಿ ಪ್ರಸ್ತಾಪಿಸಲು ಸಿದ್ಧತೆ ನಡೆಸಿದೆ. ಏತನ್ಮಧ್ಯೆ ಸಿಎಂ ಸಿಡಿ ಬಹಿರಂಗವಾಗುತ್ತಾ ಅನ್ನೋ ಕೂತೂಹಲ ಮೂಡಿಸಿದೆ.

ಆಪರೇಷನ್ ಕಮಲ ಕುರಿತು ಬಿ.ಎಸ್.ಯಡಿಯೂರಪ್ಪನವರ ಆಡಿಯೋ ಬಿಡುಗಡೆಗೊಳಿಸಿದ್ದ ಬೆನ್ನಲ್ಲೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಇಂದು ಬಿಜೆಪಿ ನಾಯಕರು ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಬಿಜೆಪಿಯ ಆಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಸಿಎಂ ವಿಡಿಯೋ ಬಿಡುಗಡೆಗೆ ಮುಂದಾಗಿರುವುದು ಸದನದಲ್ಲಿ ಇಂದು ಹೈಡ್ರಾಮಾಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.

ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆಗೆ ಸದನದಲ್ಲಿ ಮೈತ್ರಿ ಪಕ್ಷಗಳು ಬಿಗಿಪಟ್ಟು ಹಿಡಿಯಲಿದ್ದರೆ, ಬಿಜೆಪಿ ಕೂಡ ತಕ್ಕ ಉತ್ತರ ನೀಡಲು ಸನ್ನದ್ಧವಾಗಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವೇದಿಕೆ ಮೇಲೆ ಬಿಎಸ್ ವೈ ಜೊತೆ ಮಾತನಾಡದೇ ನಿರ್ಗಮಿಸಿದ ಪ್ರಧಾನಿ ಮೋದಿ