Select Your Language

Notifications

webdunia
webdunia
webdunia
webdunia

ಬಿ.ಎಸ್.ಯಡಿಯೂರಪ್ಪಗೆ ಅಧಿಕಾರದ ಹುಚ್ಚು ಹಿಡಿದಿದೆಯಂತೆ!

ಬಿಜೆಪಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಅಧಿಕಾರದ ಹುಚ್ಚು ಹಿಡಿದಿದೆ. ಹೀಗಂತ ಮಾಜಿ ಸಿಎಂ ಆರೋಪ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಮಾತನಾಡಿದ ಅವರು, ಸಂವಿಧಾನ ಬದ್ಧ ಸಮ್ಮಿಶ್ರ ಸರ್ಕಾರ ಕಿತ್ತೆಸೆಯಲು ಬಿಜೆಪಿ ಯತ್ನ ಮುಂದುವರಿಸಿದೆ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ ರ್ಯಾಲಿ ಬಗ್ಗೆ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ, ನರೇಂದ್ರ ಮೋದಿ ರ್ಯಾಲಿ ಮಾಡಿಕೊಳ್ಳಲಿ. ಬಿಜೆಪಿ ವಿರುದ್ಧ ಎಕ್ಸಪೋಸ್ ಮಾಡುವುದು ಹೇಗೆಂದು ನಮಗೆ ಗೊತ್ತಿದೆ ಎಂದು ಹೇಳಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮ ರಾಜಕೀಯ ಪ್ರವೇಶ ಮಾಡಿದ್ರೆ ಬೆಂಬಲ ಇರುತ್ತೆ ಎಂದವರಾರು?