ಬಿ.ಎಸ್.ಯಡಿಯೂರಪ್ಪನವರಿಗೆ ಸಚಿವ ಡಿ.ಕೆ.ಶಿವಕುಮಾರ್ ಅಭಿನಂದನೆಗಳನ್ನು ತಿಳಿಸುವ ಮೂಲಕ ಗಮನ ಸೆಳೆದಿದ್ದಾರೆ.
									
			
			 
 			
 
 			
					
			        							
								
																	ಗುರುಮಿಠಕಲ್ ಶಾಸಕರ ಪುತ್ರನೊಂದಿಗೆ ನಡೆಸಿರುವ ಆಪರೇಷನ್ ಕಮಲದ ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಹೇಳುವ ಮೂಲಕ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಯಡಿಯೂರಪ್ಪನವರಿಗೆ ಆ ದೇವರು ಒಳ್ಳೆಯದನ್ನು ಮಾಡಲಿ. ಸತ್ಯವನ್ನು ಬಹಳ ದಿನಗಳವರೆಗೆ ಮುಚ್ಚಿಡಲು ಆಗುವುದಿಲ್ಲ ಎಂದು ಹೇಳಿದರು.
									
										
								
																	ಯಾರದೋ ಧ್ವನಿಯನ್ನು ಇನ್ಯಾರೋ ಮಿಮಿಕ್ರಿ ಮಾಡಲು ಬರುವುದಿಲ್ಲ ಎಂದ ಅವರು, ಸಿ.ಡಿ. ವಿಷಯದಲ್ಲಿ ಮುಂದಿನ ನಿರ್ಧಾರವನ್ನು ಸದನದಲ್ಲಿ ಸಭಾಧ್ಯಕ್ಷರು ನಿರ್ಧಾರ ಮಾಡಲಿದ್ದಾರೆ ಎಂದು ಹೇಳಿದರು.