Publish Date: Sun, 10 Feb 2019 (16:45 IST)
Updated Date: Sun, 10 Feb 2019 (16:47 IST)
ಮುಂಬೈನಲ್ಲಿ ಕಾಂಗ್ರೆಸ್ ಶಾಸಕರಿಗೆ ಬಿ.ಎಸ್.ಯಡಿಯೂರಪ್ಪ ಗೃಹ ಬಂಧನ ಮಾಡಿದ್ದಾರೆ ಎಂದು ಸಚಿವರೊಬ್ಬರು ಆರೋಪ ಮಾಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರರಿಂದ ಕಾಂಗ್ರೆಸ್ ಶಾಸಕರಿಗೆ ಗೃಹ ಬಂಧನದಲ್ಲಿ ಇಡಲಾಗಿದೆ. ಮತ್ತೊಮ್ಮೆ ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆ ಮಾಡಲು ಹೊರಟಿರುವ ಬಿ.ಎಸ್. ವೈ ಮೇಲೆ ಮೋದಿ ಕ್ರಮ ತೆಗೆದುಕೊಳ್ಳಬೇಕು. ಹೀಗಂತ ಬೀದರ್ ನಲ್ಲಿ ಬಿಎಸ್ ವೈ ವಿರುದ್ಧ ಸಚಿವ ಬಂಡೆಪ್ಪ ಖಾಶೆಂಪೂರ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಕಡೆ ಇಡೀ ದೇಶ ನೋಡುತ್ತಿದೆ. ಯಾರು ಕುತಂತ್ರದಿಂದ ಮೈತ್ರಿ ಸರ್ಕಾರಕ್ಕೆ ತೊಂದರೆ ಕೊಡುತ್ತಿದ್ದಾರೆ ಅಂತಾ ಎಲ್ಲರಿಗೂ ಗೊತ್ತಿದೆ.
ಶರಣುಗೌಡ ಜೊತೆ ಮಾತನಾಡು ಎಂದು ಸಿಎಂ ಬಿಎಸ್ ವೈಗೆ ಹೇಳಿದ್ರಾ? ಎಂದು ಕೇಳಿದ ಅವರು, ಅವರೆ ತಾವಾಗೇ ಆಡಿಯೋದಲ್ಲಿ ಸಿಲುಕಿಕೊಂಡಿದ್ದಾರೆ ಎಂದರು.
6 ವರ್ಷದ ಹಿಂದಿನ ಕ್ಯಾಸೆಟ್ ಈಗ ಯಾಕೆ ಬಿಡುತ್ತಿದ್ದೀರಿ ಲಂಬಾವಳಿಯವರೇ ಎಂದು ಬೀದರ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ಪ್ರಶ್ನೆ ಮಾಡಿದ್ದಾರೆ.