Publish Date: Sat, 05 Oct 2019 (19:55 IST)
Updated Date: Sat, 05 Oct 2019 (19:56 IST)
ನೆರೆಪರಿಹಾರ ವಿಚಾರದಲ್ಲಿ "ಸಿದ್ದರಾಮಯ್ಯ ಟಾಕಿಂಗ್ ನಾನ್ ಸೆನ್ಸ್ ಥಿಂಗ್ಸ್".
ಹೀಗಂತ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಹಾಗೂ ದೀರ್ಘಾವಧಿಯ ಹಣಕಾಸು ಸಚಿವರಾಗಿದ್ದವರು. ಅವರು ಈ ರೀತಿ ಮಾತನಾಡಬಾರದು.
ಕೇಂದ್ರ ಬಿಡುಗಡೆ ಮಾಡಿದ್ದು ಮಧ್ಯಂತರ ಪರಿಹಾರ. ಎನ್ ಡಿಆರ್ ಏಫ್ ನಿಯಮಾವಳಿ ಪ್ರಕಾರ 1200 ಕೋಟಿ ನೀಡಲಾಗಿದೆ ಅಂತಂದ್ರು.
ಕಾಂಗ್ರೆಸ್ ನಾಯಕರು ಹೇಳುತ್ತಿರೋದು ಎಲ್ಲವೂ ಬೋಗಸ್. ಯುಪಿಯ ಸರ್ಕಾರದ ಹತ್ತು ವರ್ಷದ ಅವಧಿಗಿಂತಲೂ ನಮ್ಮ ಸರ್ಕಾರ ಹೆಚ್ಚು ನೀಡಿದೆ ಅಂತ ಹೇಳಿದ್ರು.
ಇನ್ನು, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೀಡಿದ್ದಕ್ಕೂ ಪರಿಹಾರಕ್ಕೂ ಯಾವುದೇ ಸಂಬಂಧವಿಲ್ಲ.
ಯತ್ನಾಳ ಅವರು ಬಿಎಸ್ ವೈ ಯವರನ್ನ ಕೇಂದ್ರ ನಾಯಕರು ಕಡೆಗಣಿಸುತ್ತಿದ್ದಾರೆ ಅನ್ನೋ ಹೇಳಿಕೆಗೆ ನೋಟಿಸ್ ನೀಡಿದ್ದಾರೆ.
ಅವರು ಸೂಕ್ತ ಉತ್ತರ ನೀಡುತ್ತಾರೆ ಎಂದು ಕೊಂಡಿದ್ದೇನೆ ಅಂತ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.