ದೆಹಲಿ: ಏಕಾಏಕಿ ನಿನ್ನೆ ಸಿಎಂ ಸಿದ್ದರಾಮಯ್ಯರಲ್ಲಿ ವೈರಾಗ್ಯದ ಮಾತುಗಳು ಆರಂಭವಾಗಿದ್ದು, ಇದರ ಅರ್ಥ ರಾಜೀನಾಮೆಯನ್ನು ನೀಡುವುದು ನಿಶ್ಚಿತ ಎಂದು ಭಾಸವಾಗುತ್ತದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಮಾಧ್ಯಮದವರ ಬಳಿ ಸಿಎಂ ಕುರ್ಚಿ ವಿಚಾರ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸುತ್ತಿರುವ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡವಳಿಕೆ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮನೆಗೆ ಕ್ಷಣಗಣನೆ ಆರಂಭವಾಗಿದೆ. ಸಿದ್ದರಾಮಯ್ಯರ ಮುಖ ಸಪ್ಪೆಯಾಗಿದ್ದು, ಡಿಕೆ ಶಿವಕುಮಾರ್ ಅವರು ಉಲ್ಲಾಸ ಭರಿತವಾಗಿ ಕಾಣುತ್ತಿದ್ದಾರೆ. ಅದಲ್ಲದೆ ಸಿದ್ದರಾಮಯ್ಯ ಮಾತನಾಡುವಾಗ ರಾಜಕೀಯವೇನು ಅಪ್ಪನ ಆಸ್ತಿನ, ಅಧಿಕಾರ ಶಾಶ್ವತನಾ ಎಂಬ ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಇದರ ಅರ್ಥ ಅವರು ರಾಜೀನಾಮೆ ನೀಡುವುದು ಪಕ್ಕಾ ಎಂದರು.
ಇನ್ನೂ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗುವ ಯೋಗ ಬಂದಾ ಮುನ್ಸೂಚನೆಯಂತೆ ಡಿಕೆ ಸುರೇಶ್ ಮುಖದಲ್ಲೂ ನಗುವನ್ನು ಕಾಣಬಹುದಾಗಿದೆ.
ರಾಜ್ಯದ ಜನತೆಗೆ ನಾಟಿಕೋಳಿ ತಿಂದ್ರಾ ಅಥವಾ ಬೇರೆ ಏನಾದ್ರೂ ತಿಂದ್ರಾ ಎಂಬ ವಿಚಾರ ಬೇಕಾಗಿಲ್ಲ. ಕಳೆದ ಎರಡೂವರೆ ವರ್ಷದಿಂದ ರಾಜ್ಯಕ್ಕಾಗಿ ಏನು ಮಾಡಿದ್ದಾರೆ ಎನ್ನುವುದು ಮುಖ್ಯ. ರಾಜ್ಯದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು ಎಂದು ಜನರ ಮುಂದೆಯಿಡಿ.
ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಏನೂ ಅಭಿವೃದ್ಧಿಯಾಗಿಲ್ಲ. ಅವರ ನಡವಳಿಕೆ ನೋಡಿದ್ರೆ ಜನವರಿಯೊಳಗೆ ರಾಜೀನಾಮೆ ನೀಡಬಹುದು ಎಂದರು.