ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸ್ಪೋಟಕ ಹೇಳಿಕೆ

Krishnaveni K
ಸೋಮವಾರ, 8 ಡಿಸೆಂಬರ್ 2025 (12:14 IST)
ಮೈಸೂರು: ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರ ಹೇಳಿಕೆ ಡಿಕೆಶಿ ಬಣದ ಕಣ್ಣು ಕೆಂಪಗಾಗಿಸುವುದಂತೂ ಸತ್ಯ.

ಹೈಕಮಾಂಡ್ ಸಲಹೆ ಮೇರೆಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ಎಲ್ಲವೂ ಸರಿಯಿದೆ ಎಂದು ಸಾರಿದ ಬೆನ್ನಲ್ಲೇ ಈಗ ಒಬ್ಬೊಬ್ಬ ನಾಯಕರ ಮಾತು ಮತ್ತೆ ಕುರ್ಚಿ ಕದನ ಗರಿಗೆದರುವ ಲಕ್ಷಣ ಕಾಣುತ್ತಿದೆ.

ಇದೀಗ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿಎಂ ಬದಲಾವಣೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ‘ಡಿಕೆ ಶಿವಕುಮಾರ್ ಹೈಕಮಾಂಡ್ ಬಳಿ ತಮಗೆ ಅವಕಾಶ ಕೊಡಿ ಎಂದು ಕೇಳಿದ್ದರು. ಆದರೆ ಹೈಕಮಾಂಡ್ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದಿದೆ. ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂಬ ವಿಶ್ವಾಸ ನಮಗಿದೆ.

ನಮ್ಮಲ್ಲಿ ಯಾವುದೇ ಕಿತ್ತಾಟವಿಲ್ಲ. ನಾಯಕತ್ವ ಬದಲಾವಣೆಯಿಲ್ಲ ಎಂದು ಹೈಕಮಾಂಡ್ ಹೇಳಿದೆ. ಇದೆಲ್ಲಾ ವಿಪಕ್ಷದವರು ಹುಟ್ಟುಹಾಕುತ್ತಿರುವ ವದಂತಿಗಳು’ ಎಂದು ಯತೀಂದ್ರ ಹೇಳಿಕೆ ನೀಡಿದ್ದಾರೆ. ಇದೀಗ ಡಿಕೆಶಿ ಬಣದ ಕಣ್ಣು ಕೆಂಪಗಾಗಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಂಜಾಬ್ ನಲ್ಲೇ 500 ಕೋಟಿ, ನಮ್ಮಲ್ಲಿ ಕಾಂಗ್ರೆಸ್ಸಿಗರು ಹೈಕಮಾಂಡ್ ಗೆ ಎಷ್ಟು ಕೊಡ್ತಾರೋ: ಆರ್ ಅಶೋಕ್

ನಿರ್ಮಲಾ ಸೀತಾರಾಮನ್ ಎಂತವ್ಳು ಅವ್ಳು ಎಂದ ಸಿದ್ದರಾಮಯ್ಯ: ವಿಡಿಯೋ

ಹೆಚ್ಚು ಮಕ್ಕಳ ಮಾಡಿಕೊಳ್ಬೇಡಿ, ಅಂತರ್ಜಾತಿ ವಿವಾಹವಾಗಿ ಎಂದ ಸಿದ್ದರಾಮಯ್ಯ

ಅಧಿಕಾರ ಹಂಚಿಕೆ ಬಗ್ಗೆ ಸೋನಿಯಾ ಗಾಂಧಿಯಿಂದಲೇ ಬಂತು ಮಹತ್ವದ ಸಂದೇಶ

ಕುಸ್ತಿ ಕದನ ತಣ್ಣಗಾಗುತ್ತಲೇ ಸಿದ್ದರಾಮಯ್ಯಗೆ ಎದುರಾಗಿದೆ ಮತ್ತೊಂದು ಪರೀಕ್ಷೆ

ಮುಂದಿನ ಸುದ್ದಿ
Show comments