ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ನಡೆಯುತ್ತಿದ್ದ ಅಧಿಕಾರ ಹಂಚಿಕೆ ಫೈಟ್ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ಡಿಕೆಶಿ ಟ್ವೀಟ್ ಗೆ ಪ್ರತಿಯಾಗಿ ಈಗ ಸಿದ್ದರಾಮಯ್ಯ ಹೊಸ ಟ್ವೀಟ್ ಮಾಡಿದ್ದಾರೆ.
ಇಂದು ಬೆಳಿಗ್ಗೆಯೇ ಡಿಸಿಎಂ ಡಿಕೆ ಶಿವಕುಮಾರ್ ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದು ಸಿದ್ದರಾಮಯ್ಯ ಬಗ್ಗೆಯೇ ಪರೋಕ್ಷವಾಗಿ ಕುಟುಕಿರಬಹುದೇ ಎಂದು ಹಲವರು ವಿಶ್ಲೇಷಿಸಿದ್ದರು.
ಇದರ ಬೆನ್ನಲ್ಲೇ ಇದೀಗ ಸಂಜೆ ವೇಳೆಗೆ ಸಿಎಂ ಸಿದ್ದರಾಮಯ್ಯ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದು ಇದು ಡಿಕೆಶಿಗೆ ಕೊಟ್ಟ ಕೌಂಟರ್ ಇರಬಹುದೇ ಎಂದು ವಿಶ್ಲೇಷಿಸಲಾಗುತ್ತಿದೆ. ನಮ್ಮ ಭರವಸೆ ಕರ್ನಾಟಕಕ್ಕೆ ಕೇವಲ ಸ್ಲೋಗನ್ ಅಲ್ಲ, ಇದುವೇ ನಮ್ಮ ಜಗತ್ತು ಎಂಬ ಅರ್ಥ ಬರುವ ಇಂಗ್ಲಿಷ್ ಸಾಲೊಂದನ್ನು ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.
ಈ ಮೂಲಕ ಈಗ ಸಿದ್ದು-ಡಿಕೆಶಿ ಕುರ್ಚಿ ಫೈಟ್ ಸೋಷಿಯಲ್ ಮೀಡಿಯಾವರೆಗೂ ಬಂತೇ ಎಂಬ ಅನುಮಾನ ಮೂಡಿದೆ. ಕುರ್ಚಿ ಕದನ ಹೈಕಮಾಂಡ್ ಅಂಗಳದಲ್ಲಿದ್ದು ಕ್ಲೈಮ್ಯಾಕ್ಸ್ ಹಂತದಲ್ಲೇ ಇಬ್ಬರ ನಡುವಿನ ಸೋಷಿಯಲ್ ಮೀಡಿಯಾ ವಾರ್ ಎಲ್ಲರ ಗಮನ ಸೆಳೆಯುತ್ತಿದೆ.