Publish Date: Thu, 27 Nov 2025 (15:12 IST)
Updated Date: Thu, 27 Nov 2025 (15:16 IST)
ಬೆಂಗಳೂರು: ರಾಜ್ಯದಲ್ಲಿ ಕುರ್ಚಿ ಫೈಟ್ ನಡೆಯುತ್ತಿರುವ ಬೆನ್ನಲ್ಲೇ ಹೈಕಮಾಂಡ್ ನಾಯಕರು ಇಂದು ಸಭೆ ನಡೆಸಿ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದಾರೆ. ಇದರ ನಡುವೆ ಡಿಕೆ ಶಿವಕುಮಾರ್ ಗೆ ಪಟ್ಟ ಕಟ್ಟಿದರೆ ಹೈಕಮಾಂಡ್ ಗೆ ಮತ್ತೊಂದು ಭಯ ಶುರುವಾಗಿದೆ.
ಮುಖ್ಯಮಂತ್ರಿ ಪಟ್ಟಕ್ಕಾಗಿ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ಗೆ ಹುದ್ದೆ ಕೊಡುವುದು ಹೈಕಮಾಂಡ್ ಗೆ ಸುಲಭದ ಕೆಲಸವಲ್ಲ. ಅದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಾಗಿ ಹೊಸ ಸಮಸ್ಯೆಗಳು ಶುರುವಾಗುತ್ತವೆ.
ಡಿಕೆ ಶಿವಕುಮಾರ್ ಗೆ ಸಿಎಂ ಹುದ್ದೆ ಬಿಟ್ಟು ಕೊಡಿ ಎಂದು ಹೈಕಮಾಂಡ್ ಕೇಳಿದರೆ ಏನು ಮಾಡಬೇಕು ಎಂದು ಸಿದ್ದರಾಮಯ್ಯ ಬಣ ಈಗಾಗಲೇ ತೀರ್ಮಾನಿಸಿದೆ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಲವು ನಾಯಕರು ಈಗಾಗಲೇ ಸಭೆ ನಡೆಸಿ ದಲಿತ ಸಿಎಂ ಅಥವಾ ಮತ್ತೊಬ್ಬ ನಾಯಕರ ಹೆಸರು ಸೂಚಿಸಲು ಮುಂದಾಗಿದೆ.
ಒಂದು ವೇಳೆ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಕೊಡಲು ಹೇಳಿದರೆ ಸಿಡಿದೇಳಲು ಸಿದ್ದರಾಮಯ್ಯ ಸಿದ್ಧವಾಗಿದೆ. ಇಲ್ಲವೇ ಮತ್ತೊಬ್ಬ ಅಭ್ಯರ್ಥಿಯ ಹೆಸರು ಸೂಚಿಸಬಹುದು. ಮತ್ತೊಬ್ಬ ವ್ಯಕ್ತಿ ಸಿಎಂ ಆದರೆ ಡಿಕೆ ಶಿವಕುಮಾರ್ ಬಣ ಸುಮ್ಮನಿರದು. ಆಗ ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತಷ್ಟು ಗೊಂದಲಗಳು ಏರ್ಪಡಲಿದೆ. ಹೀಗಾಗಿ ಹೈಕಮಾಂಡ್ ಗೆ ಈಗ ದೊಡ್ಡ ಸವಾಲು ಮುಂದಿದೆ.