Publish Date: Thu, 27 Nov 2025 (14:57 IST)
Updated Date: Thu, 27 Nov 2025 (15:00 IST)
ಉಡುಪಿ: ನಾಳೆ ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಕರಾವಳಿ ಬಿಜೆಪಿ ನಾಯಕರು ಫುಲ್ ಆಕ್ಟಿವ್ ಆಗಿದ್ದಾರೆ.
ಮೋದಿ ಬರುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದಲೇ ಉಡುಪಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ನಾಳೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಉಡುಪಿ ಕೃಷ್ಣ ಮಠದ ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಸೂಚಿಸಲಾಗಿದೆ. ದ್ರೋಣ್ ಹಾರಾಟ ನಿಷೇಧಿಸಲಾಗಿದೆ.
ಭದ್ರತೆಗಾಗಿ 3,000 ಪೊಲೀಸರು, ಎನ್ ಎಸ್ ಜಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಉಡುಪಿ ಈಗ ಅಕ್ಷರಶಃ ಪೊಲೀಸರ ಭದ್ರಕೋಟೆಯಾಗಿದೆ. ಪೊಲೀಸರ ಕಡೆಯಿಂದ ಇಂತಹ ತಯಾರಿಗಳಾಗುತ್ತಿದ್ದರೆ ಅತ್ತ ಬಿಜೆಪಿ ನಾಯಕರೂ ಫುಲ್ ಆಕ್ಟಿವ್ ಆಗಿದ್ದಾರೆ.
ಇಂದು ಬೆಳಿಗ್ಗೆಯೇ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಸುನಿಲ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರು ರಥಬೀದಿಯಲ್ಲಿ ರೌಂಡ್ಸ್ ಹಾಕಿ ಭದ್ರತೆಗಳ ಪರಿಶೀಲನೆ ನಡೆಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕವೂ ಮೋದಿಗೆ ಸ್ವಾಗತ ಕೋರುತ್ತಿದ್ದಾರೆ. ನಾಳೆ ಮೋದಿ ಭೇಟಿ ವೇಳೆ ಕರ್ನಾಟಕದ ಬಹುತೇಕ ಬಿಜೆಪಿ ನಾಯಕರು ಉಡುಪಿಯಲ್ಲಿರಲಿದ್ದಾರೆ.