Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಪತ್ನಿ ನನ್ನ ಸಹೋದರಿ ಇದ್ದಂಗೆ: ಎಚ್‌ ಡಿ ಕುಮಾರಸ್ವಾಮಿ

Chief Minister Siddaramaiah, Central Minister HD Kumaraswamy, MUDA Scam,

Sampriya

ಬೆಂಗಳೂರು , ಮಂಗಳವಾರ, 1 ಅಕ್ಟೋಬರ್ 2024 (16:47 IST)
ಬೆಂಗಳೂರು: ತಪ್ಪು ಮಾಡಿ ಈಗ ಸೈಟ್ ವಾಪಾಸ್ ನೀಡಿದ್ರೆ ಏನ್ ಪ್ರಯೋಜವಿದೆ. ರೈಲು ಹೊರಟು ಹೋದಾಗಿದ್ದು, ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರದ ಬಗ್ಗೆ ಹೊರಬರಬೇಕಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಸೈಟು ವಾಪಾಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಕರಣ ಬೆಳಕಿಗೆ ಬಂದ ದಿನವೇ ವಾಪಾಸ್ ನೀಡುತ್ತಿದ್ದರೆ ಆಗುತ್ತಿತ್ತು. ಆದರೆ ಇದೀಗ ಸಹೋದರಿ ತನ್ನ ಪತಿ, ಮಕ್ಕಳಿಗೆ ಗೊತ್ತಿಲ್ಲದ ಹಾಗೇ ಸೈಟ್ ವಾಪಾಸ್‌ ನೀಡುತ್ತಿರುವುದಾಗಿ ಹೇಳುತ್ತಿರುವುದನ್ನು ಹೇಗೆ ನಂಬಬಹುದು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಸಹೋದರಿಗೆ ಸಮಾನರಾದವರು. ಅವರ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರ ಪ್ರಮುಖವಾಗಿದ್ದು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ನಡೆದುಕೊಳ್ಳಬಾರದು.

ಸಿದ್ದರಾಮಯ್ಯ ಅವರು ಸ್ವತಃ ಲಾಯರ್ ಆಗಿ ಬಹಳ ಜನರಿಗೆ ಪಾಠ ಮಾಡಿದ್ದೇನೆಂದು ಹೇಳಿರುವ ಅವರು ಈ ಪ್ರಕರಣದ ಸಾಧಕ ಬಾಧಕಗಳ ಬಗ್ಗೆ ಗೊತ್ತಿಲ್ವ ಎಂದು ಪ್ರಶ್ನೆ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ: ಬಿಜೆಪಿ