Select Your Language

Notifications

webdunia
webdunia
webdunia
webdunia

ಸೈಟು ವಾಪಸ್ ಕೊಟ್ರೆ ತಪ್ಪು ಮಾಡಿದ್ದೀನಿ ಅಂತೇನ್ರೀ, ನಾನು ಯಡಿಯೂರಪ್ಪ ಥರಾ ಅಲ್ಲ: ಸಿದ್ದರಾಮಯ್ಯ

Siddaramaiah

Krishnaveni K

ಬೆಂಗಳೂರು , ಮಂಗಳವಾರ, 1 ಅಕ್ಟೋಬರ್ 2024 (15:42 IST)
ಬೆಂಗಳೂರು: ಸೈಟ್ ವಾಪಸ್ ಕೊಟ್ರೆ ನಾನು ತಪ್ಪು ಮಾಡಿದ್ದೀನಿ ಅಂತನೇನ್ರೀ.. ಹೀಗಂತ ಮುಡಾ ಸೈಟು ವಾಪಸ್ ಕೊಟ್ಟಿದ್ದಕ್ಕೆ ವಿಪಕ್ಷಗಳ ಪ್ರತಿಕ್ರಿಯೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿದ್ದು ನನ್ನ ಪತ್ನಿ ಮನನೊಂದು ಸೈಟು ವಾಪಸ್ ಮಾಡಿದ್ದಾರೆ. ಹಾಗಂತ ನಾನು ತಪ್ಪು ಮಾಡಿದ್ದೇನೆ ಎಂದು ಅರ್ಥ ಆಗುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮೊದಲು ಬಿಜೆಪಿ ನಾಯಕರು ಸೈಟು ವಾಪಸ್ ಮಾಡಿದ್ದಾರೆ ಎಂದು ತಪ್ಪು ಒಪ್ಪಿಕೊಂಡ ಹಾಗೆ ಎಂದಿದ್ದರು.

ಅಲ್ಲದೆ, ಬಿ ವೈ ವಿಜಯೇಂದ್ರ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಈ ಹಿಂದೆ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪನವರ ಭೂಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸೈಟು ವಾಪಸ್ ಮಾಡಿದ್ದಾರೆಂದರೆ ತಪ್ಪು ಮಾಡಿದ್ದಾರೆ ಎಂದರ್ಥ ಎಂದಿದ್ದರು. ಅದನ್ನೇ ಇಟ್ಟುಕೊಂಡು ಈಗ ಬಿಜೆಪಿ ಟಾಂಗ್ ಕೊಟ್ಟಿದೆ.

ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ನನ್ನ ಮೇಲೆ ಆರೋಪ ಬಂದಿದ್ದಕ್ಕೆ ಮನನೊಂದು ಪತ್ನಿ ಸೈಟ್ ವಾಪಸ್ ಮಾಡಿದ್ದಾರೆ. ನಾನು ಯಡಿಯೂರಪ್ಪನವರ ಥರಾ ಡಿನೋಟಿಫಿಕೇಷನ್ ಮಾಡಿಲ್ಲ. ನಮ್ಮ ಸೈಟ್ ಸ್ವಾಧೀನಪಡಿಸಿಕೊಂಡಿದ್ದಕ್ಕೆ ಮುಡಾದವರು ಪರಿಹಾರವಾಗಿ ಇನ್ನೊಂದು ಸೈಟ್ ಕೊಟ್ಟಿದ್ದಾರೆ. ಅದೂ ನಾವು ಇಂಥಾ ಜಾಗದಲ್ಲೇ ಕೊಡಿ ಎಂದು ಕೇಳಿಲ್ಲ. ನಾನು ಯಾವುದೇ ಆದೇಶ ನೀಡಿರಲಿಲ್ಲ. ಹೀಗಿರುವಾಗ ನನ್ನ ತಪ್ಪು ಹೇಗಾಗುತ್ತದೆ? ನಾನು ತಪ್ಪೇ ಮಾಡದೇ ಇರುವಾಗ ರಾಜೀನಾಮೆ ಕೊಡುವ ಪ್ರಶ್ನೆ ಎಲ್ಲಿದೆ ಎಂದಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯರಿಗೆ Ayushman Card ಗೆ ಇಂದಿನಿಂದಲೇ ನೋಂದಣಿ ಶುರು, ಮಾಡುವ ವಿಧಾನ ಹೀಗೆ