Select Your Language

Notifications

webdunia
webdunia
webdunia
webdunia

ಪತ್ನಿ ಲೆಟರ್ ಬರೆದಿದ್ದು ನಿಮಗೊತ್ತಿಲ್ವಾ: ಎಂಥಾ ನಾಟಕ ಮಾಡ್ತೀರಿ ಸಿದ್ದರಾಮಯ್ಯ ಎಂದ ನೆಟ್ಟಿಗರು

Siddaramaiah

Krishnaveni K

ಬೆಂಗಳೂರು , ಮಂಗಳವಾರ, 1 ಅಕ್ಟೋಬರ್ 2024 (10:50 IST)
ಬೆಂಗಳೂರು: ಮುಡಾ ಹಗರಣದಲ್ಲಿ ಪತಿ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಪಾರ್ವತಿ ಸಿದ್ದರಾಮಯ್ಯ 14 ಸೈಟುಗಳನ್ನೂ ಹಿಂಪಡೆಯುವಂತೆ ಮುಡಾಗೆ ಪತ್ರ ಬರೆದಿದ್ದಾರೆ. ಈ ಪತ್ರದ ಬಗ್ಗೆ ನನಗೇ ಆಶ್ಚರ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಅವರ ಪ್ರತಿಕ್ರಿಯೆಗೆ ನೆಟ್ಟಿಗರು ಕಿಡಿ ಕಾರಿದ್ದಾರೆ.

ನಿಮ್ಮ ಪತ್ನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ಇಲ್ಲ ಅಂತೀರಿ. ಅಂತಹವರು ಪತ್ರ ಬರೆದಿದ್ದು ನಿಮಗೇ ಗೊತ್ತಿಲ್ವಾ? ನಿಮ್ಮನ್ನು ಕೇಳದೇ ಈ ನಿರ್ಧಾರ ಮಾಡುತ್ತಾರಾ? ನಮ್ಮ ಕಿವಿ ಮೇಲೆ ಹೂ ಇಡಬೇಡಿ ಸಾರ್ ಎಂದಿದ್ದಾರೆ. ಒಂದು ವೇಳೆ ನೀವು ತಪ್ಪು ಮಾಡಿಲ್ಲ ಎಂದಾದರೆ ಈ ನಾಟಕ ಎಲ್ಲಾ ಯಾಕೆ? ಸೈಟು ಹಿಂದಿರುಗಿಸುತ್ತಿರುವುದು ಯಾಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಈ ಹಿಂದೆ ವಾಚ್ ಕೂಡಾ ಅಷ್ಟೇ. ನಿಮ್ಮ ಮೇಲೆ ಅಪವಾದ ಬಂದಾಗ ಹಿಂದಿರುಗಿಸಿದಿರಿ. ತಪ್ಪು ಮಾಡಿಲ್ಲ ಎಂದಾದರೆ ಭಯ ಯಾಕೆ? ಎಲ್ಲಿ ನಿಮ್ಮ ಬೇರೆ ಅಕ್ರಮ ಆಸ್ತಿಗಳೂ ಬೆಳಕಿಗೆ ಬರಬಹುದು ಎಂಬ ಭಯಕ್ಕೆ ಈ ಸೈಟುಗಳನ್ನು ಹಿಂದಿರುಗಿಸುತ್ತಿದ್ದೀರಿ ಅಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಇಷ್ಟೆಲ್ಲಾ ನಾಟಕವಾಡುವ ಬದಲು ರಾಜೀನಾಮೆ ನೀಡಿ ತನಿಖೆ ಎದುರಿಸಬಹುದಲ್ಲವೇ? ತಪ್ಪು ಮಾಡಿಲ್ಲ ಎಂದಾದರೆ ತರಾತುರಿಯಲ್ಲಿ ಅಧಿಕಾರಿಗಳೊಂದಿಗೆ, ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸುತ್ತಿರುವುದು ಯಾಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುರ್ಚಿಗಾಗಿ ಒಳಗೊಳಗೇ ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದಾರಾ ಡಿಕೆ ಶಿವಕುಮಾರ್, ಪರಮೇಶ್ವರ್