Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಕುರ್ಚಿ ಖಾಲಿಗಾಗಿ ಕಾಯುತ್ತಿರುವ ಹೊಟ್ಟೆ ಕಿಚ್ಚಿಗರು: ಸಚಿವ ಸಿ ಮಹದೇವಪ್ಪ ಟಾಂಗ್

MUDA Scam, Chief Minister Siddaramaiah, Minister Dr.H C Mahadevappam

Sampriya

ಮೈಸೂರು , ಭಾನುವಾರ, 29 ಸೆಪ್ಟಂಬರ್ 2024 (12:34 IST)
Photo Courtesy X
ಮೈಸೂರು: ಕೆಲವರು ಮುಖ್ಯಮಂತ್ರಿ ಕುರ್ಚಿ ಖಾಲಿಯಾಗಿ, ತನಗೆ ಧಕ್ಕಲಿ ಎಂದು ಕಾಯುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್ ಸಿ ಮಹದೇವಪ್ಪ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಅವರು,  ಸಿಎಂ ಸಿದ್ದರಾಮಯ್ಯ ಮೇಲಿನ ಹೊಟ್ಟೆ ಕಿಚ್ಚಿನಿಂದಾಗಿ ಮುಖ್ಯಮಂತ್ರಿ ಕುರ್ಚಿ ಖಾಲಿಯಾಗಲಿ ಎಂದು ಆಶಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಕುರ್ಚಿ ಆಕಾಂಕ್ಷಿಗಳಿಗೆ ಟಾಂಗ್ ನೀಡಿದರು.

ಈ ವೇಳೆ ಆನೆ ಮತ್ತು ನರಿ ಕಥೆ ಹೇಳಿ ಪರೋಕ್ಷವಾಗಿ ಕೌಂಟರ್ ನೀಡಿದರು. ಈ ಮೂಲಕ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟವರ ಮೇಲೆ ತೀವ್ರ ಅಸಮಾಧಾನ ಹೊರಹಾಕಿದರು. 3 ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಸಂಚು ನಡೆಸುತ್ತಿದ್ದು, ಇದನ್ನು ನಾವೆಲ್ಲರೂ ಒಗ್ಗಟ್ಟಿನಿಂದ ತಡೆಯುವ ಪ್ರಯತ್ನ ಮಾಡಬೇಕಿದೆ. ಅಂಥವರಿಗೆ ತಕ್ಕ ಬುದ್ದಿ ಕಲಿಸಬೇಕಿದೆ ಎಂದರು.

ಸಿದ್ದರಾಮಯ್ಯ ಅವರ ಜೀವದ ಉದ್ದಗಲಕ್ಕೂ ನೇರ ಹಾಗೂ ನಿಷ್ಠುರವಾಗಿ ಮಾತನಾಡಿದವರು. ಅವರ ಸಾರ್ವಜನಿಕ ಉದ್ದಕ್ಕೂ ಸ್ವಾರ್ಥ ಮತ್ತು ತನ್ನ ಲಾಭಕ್ಕಾಗಿ ಯಾವತ್ತೂ ಉತ್ತೇಜನ ಕೊಟ್ಟವರಲ್ಲ ಎಂದು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿಯಲ್ಲಿ 5 ವರ್ಷದ ಬಾಲಕ ಸಾವು: ಡೆಂಗ್ಯೂ ಶಂಕೆ