Select Your Language

Notifications

webdunia
webdunia
webdunia
webdunia

ಎಲ್ಲ ಮುಗಿದ್ಮೇಲೆ ಸೈಟ್ ವಾಪಾಸ್ ಕೊಟ್ಟರೆ ಏನ್ ಪ್ರಯೋಜನ: ಪ್ರತಾಪ್ ಸಿಂಹ

ಎಲ್ಲ ಮುಗಿದ್ಮೇಲೆ ಸೈಟ್ ವಾಪಾಸ್ ಕೊಟ್ಟರೆ ಏನ್ ಪ್ರಯೋಜನ: ಪ್ರತಾಪ್ ಸಿಂಹ

Sampriya

ಮೈಸೂರು , ಮಂಗಳವಾರ, 1 ಅಕ್ಟೋಬರ್ 2024 (15:45 IST)
ಮೈಸೂರು: ಎಲ್ಲ ಮುಗಿದ್ಮೇಲೆ ಈಗ ಬಂದು ಸೈಟ್ ವಾಪಸ್ ಕೊಡ್ತೇನೆ ಅಂತಾ ಹೇಳಿದ್ರೆ ಎನೂ ಪ್ರಯೋಜವಿಲ್ಲ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿತನಿಖೆ ಎದುರಿಸಬೇಕು ಎಂದು ಮಾಜಿ ಸಂಸ, ಬಿಜೆಪಿ ಮುಖಂಡ ಪ್ರತಾಪ ಸಿಂಹ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಸಿದ್ದರಾಮಯ್ಯ ಅವರಲ್ಲಿ ಮುಡಾ ಪ್ರಕರಣ ಬೆಳಕಿಗೆ ಬರುತ್ತಿದ್ದ ಹಾಗೇ ಸೈಟ್ ವಾಪಾಸ್, ನೀಡಿ ತನಿಖೆ ಎದುರಿಸುವಂತೆ ಸಲಹೆ ನೀಡಿದ್ದೆ.  ಈಗ ಇ.ಡಿ.‌ ಪ್ರಕರಣ ದಾಖಲಾದ ನಂತರ ವಾಪಸ್ ನೀಡಿದ್ದಾರೆ. ಆಗಲೇ ನೀಡಿದ್ದರೆ ಕುರ್ಚಿ ಕಳೆದುಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ. ಈಗ ಕೊಟ್ಟರೂ ಪ್ರಯೋಜನ ಇಲ್ಲ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

2023ರ ಚುನಾವಣೆ ಸಂದರ್ಭವೇ ಈ ನಿವೇಶನಗಳ ಅಕ್ರಮದ ದಾಖಲೆ ಬಂದಿತ್ತು. ಆದರೆ ಸಿದ್ದರಾಮಯ್ಯ ಪತ್ನಿ ವಿಚಾರ ಎಂಬ ಕಾರಣಕ್ಕೆ ಸುದ್ದಿಗೋಷ್ಡಿ ನಡೆಸಲಿಲ್ಲ' ಎಂದರು.

ಈ ಪ್ರಕರಣ ಕುಟುಂಬ ರಾಜಕಾರಣ ಮಾಡುವವರಿಗೆ ಒಂದು ಪಾಠ. ಮುಂದೆಯಾದರು ಎಚ್ಚರಿಕೆಯ ಹೆಜ್ಜೆಯಿಡಿ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೈಟು ವಾಪಸ್ ಕೊಟ್ರೆ ತಪ್ಪು ಮಾಡಿದ್ದೀನಿ ಅಂತೇನ್ರೀ, ನಾನು ಯಡಿಯೂರಪ್ಪ ಥರಾ ಅಲ್ಲ: ಸಿದ್ದರಾಮಯ್ಯ